ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Honnavar: ಶ್ರೀ ಕ್ಷೇತ್ರ ಬಂಗಾರ ಮಕ್ಕಿಯಲ್ಲಿ ಸಂಸ್ಕೃತಿ ಕುಂಭ ಮಲೆನಾಡ ಉತ್ಸವ 2026

Honnavar: ಶ್ರೀ ಕ್ಷೇತ್ರ ಬಂಗಾರ ಮಕ್ಕಿಯಲ್ಲಿ ಸಂಸ್ಕೃತಿ ಕುಂಭ ಮಲೆನಾಡ ಉತ್ಸವ 2026

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಬಂಗಾರ ಮಕ್ಕಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿ ಅವರ ನೇತೃತ್ವದಲ್ಲಿ ಮಾರ್ಚ್ 27ರಿಂದ ಏಪ್ರಿಲ್ 2ರವರೆಗೆ ಸಂಸ್ಕೃತಿ ಕುಂಭ ಮಲೆನಾಡ ಉತ್ಸವ 2026 ವೈಭವದಿಂದ ನಡೆಸಲು ತೀರ್ಮಾನಿಸಲಾಗಿದೆ
 ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಜನಪದ ನೃತ್ಯ ಸ್ಪರ್ಧೆ ಹಾಗೂ ಭಜನಾ ಕುಣಿತ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಜನಪದ ನೃತ್ಯ ಸ್ಪರ್ಧೆಯು ಪ್ರಥಮ ಒಂದು ಲಕ್ಷ ದ್ವಿತೀಯ 75000 ತೃತೀಯ 50,000 ಚತುರ್ಥ 25000 ಹಾಗೂ ಸಮಾಧಾನಕರ 10000 ರೂಪಾಯಿ ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಭಜನಾಕುಣಿತ ಸ್ಪರ್ಧೆಗೆ ಪ್ರಥಮ 70000 ದ್ವಿತೀಯ 50,000 ತೃತೀಯ ಮೂವತ್ತು ಸಾವಿರ ಚತುರ್ಥ 20000 ಹಾಗೂ ಸಮಾಧಾನಕರ 10,000 ರೂಪಾಯಿ ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು,

  ತಮ್ಮ ಹೆಸರುಗಳನ್ನ ನೋಂದಾಯಿಸಲು ದಿನಾಂಕ 15-2- 2026 ವರೆಗೆ ಅವಕಾಶ ನೀಡಲಾಗಿದೆ 9986710126 ಈ ಸಂಖ್ಯೆಗೆ ಕರೆ ಮಾಡಿ ತಮ್ಮ ತಂಡದ ಹೆಸರನ್ನ ನೋಂದಾಯಿಸಿಕೊಳ್ಳಬೇಕು ದಿನಾಂಕ 27- 3- 2026 ರಾಮನವಮಿಯಂದು ಪ್ರಾರಂಭವಾಗುವ ಉತ್ಸವವು ದಿನಾಂಕ 2 -4- 2026ರ ಹನುಮ ಜಯಂತಿ ಎಂದು ಶ್ರೀ ವಿಶ್ವ ವೀರಾಂಜನೇಯ ಶ್ರೀಮನ್ ಬ್ರಹ್ಮರ ರಥೋತ್ಸವದೊಂದಿಗೆ ಮುಕ್ತಾಯಗೊಳ್ಳುವುದು. 

ಈ ಸಂದರ್ಭದಲ್ಲಿ ಮೀನುಗಾರರ ಸಮ್ಮೇಳನ ಕುಣಬಿ ಸಮ್ಮೇಳನ ಸಾಹಿತ್ಯ ಸಮ್ಮೇಳನ ಕವಿ ಸಮ್ಮೇಳನ ಉತ್ತರ ಕನ್ನಡದ ಉಳಿವಿಗಾಗಿ ಸ್ವಾಭಿಮಾನಿ ಜನ ಸಮಾವೇಶ ಉಚಿತ ಆರೋಗ್ಯ ತಪಾಸಣಾ ಶಿಬಿರ ಪಾರಂಪರಿಕ ವೈದ್ಯರ ಸಮ್ಮೇಳನ ಶ್ರೀ ರಾಮಚಂದ್ರನ ಶರದಿಂದ ಉದ್ಭವಿಸಿದ ಶರಾವತಿ ನದಿಯಲ್ಲಿ ಪವಿತ್ರ ಕುಂಭ ಸ್ನಾನ ಹಾಗೂ ಶರಾವತಿ ಆರತಿ ಕಾರ್ಯಕ್ರಮಗಳು ಆಯೋಜನೆಗೊಂಡಿದೆ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಡಿನ ಎಲ್ಲಾ ಸದ್ಭಕ್ತರು ಆಗಮಿಸಿ ಶ್ರೀದೇವರ ಹಾಗೂ ಶ್ರೀ ಗುರೂಜಿಯವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಈ ಮೂಲಕ ಪ್ರಕಟಣೆ ತಿಳಿಸಲಾಗಿದೆ.

Ads on article

Advertise in articles 1

advertising articles 2

Advertise under the article