ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Bಬ್ರಹ್ಮಾವರ: ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

Bಬ್ರಹ್ಮಾವರ: ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

ಬ್ರಹ್ಮಾವರ: ಟಿಪ್ಪರ್ ಲಾರಿಯಲ್ಲಿ ಅಂಪಾರಿನ ದಕ್ಕೆಯಿಂದ ಬ್ರಹ್ಮಾವರ ಕಡೆಗೆ ಆಕ್ರಮವಾಗಿ ಮರಳನ್ನು ಕದ್ದು ತುಂಬಿಸಿಕೊoಡು ಸಾಗಾಟ ಮಾಡಿ ಲಘು ಸಂಘಟಿತ ಅಪರಾಧ ಎಸಗಿದ ಆರೋಪದ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಆರೋಪಕ್ಕೆ ಸಂಬoಧಿಸಿದoತೆ ಲಾರಿಯ ಚಾಲಕನಾದ ವಸಂತ್‌ರವರನ್ನು ಬಂಧಿಸಿ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ಉಡುಪಿಗೆ ಹಾಜರು ಪಡಿಸಿದ ಸಮಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ನ್ಯಾಯಾಲಯವು ಆರೋಪಿಗೆ ಮಧ್ಯಂತರ ಜಾಮೀನು ಆದೇಶ ಮಾಡಿರುತ್ತದೆ.
 ಆರೋಪಿ ವಸಂತ್‌ರವರು ಇತರರೊಂದಿಗೆ ಸೇರಿಕೊಂಡು ಅಂಪಾರಿನ ದಕ್ಕೆಯಿಂದ ಮರಳನ್ನು ಕದ್ದು ಟಿಪ್ಪರ್ ಲಾರಿಯಲ್ಲಿ ಸಾಗಾಟ ಮಾಡಿ ಲಘು ಸಂಘಟಿತ ಅಪರಾಧ ಎಸಗಿರುವುದು ಕಂಡು ಬಂದಿರುತ್ತದೆ ಎನ್ನುವ ಆರೋಪದ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ಆರೋಪಿತರ ವಿರುದ್ಧ B.N.S.S ಕಾಯ್ದೆಯ ಸೆಕ್ಷನ್‌ಗಳಾದ 112, 303(2) ಮತ್ತು MMDR ಕಾಯ್ದೆಯ 4(1A) 2, (4) ಆಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿತ್ತು.
 ಈ ಪ್ರಕರಣಕ್ಕೆ ಸಂಬoಧಿಸಿದoತೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿರುತ್ತದೆ. ಆರೋಪಿಯ ಪರವಾಗಿ ಉಡುಪಿಯ ನ್ಯಾಯವಾದಿ ಆರೂರು ಸುಕೇಶ್ ಶೆಟ್ಟಿಯವರು ವಾದಿಸಿದ್ದರು.

Ads on article

Advertise in articles 1

advertising articles 2

Advertise under the article