ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kota : ಮೊಳಹಳ್ಳಿ ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರ ದಾಳಿ..!   ಮಾಲಕನ ಸಹಿತ 22 ಜನರ ಮೇಲೆ ಕೇಸು ದಾಖಲು..!

Kota : ಮೊಳಹಳ್ಳಿ ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರ ದಾಳಿ..! ಮಾಲಕನ ಸಹಿತ 22 ಜನರ ಮೇಲೆ ಕೇಸು ದಾಖಲು..!

ಬೈಂದೂರು: ಕುಂದಾಪುರ ತಾಲೂಕಿನ ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕ ಪ್ರವೀಣ್ ಕುಮಾರ್ ರವರಿಗೆ ಬಂದ ಖಚಿತ ಮಾಹಿತಿಯಂತೆ ಗುರುವಾರ ಮಧ್ಯಾಹ್ನ ಸಿಬಂದಿಗಳ ಸಹಕಾರದಿಂದ ಮೊಳಹಳ್ಳಿ ಗ್ರಾಮದ ಮರತ್ತೂರಿನ  
 ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ರಾಶಿ ಹಾಕಿದ ಸ್ಥಳಕ್ಕೆ ಹೋದಾಗ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಪರಿಣಾಮ ಸುಮಾರು 15 ರಿಂದ 20 ಜನ ಕೆಲಸದವರು ಮರಳು ಅಡ್ಡೆ ಯಲ್ಲಿ ಕೆಲಸ ಮಾಡಿದರು ಅಲ್ಲೇ ಪಕ್ಕದಲ್ಲಿ ಹೊಳೆಯಲ್ಲಿ ಮರಳು ತುಂಬಿದ 3 ಬೋಟ್ ಗಳು ಕಂಡುಬಂದಿದೆ, 
 ಮರಳು ರಾಶಿ ಹಾಕುತ್ತಿರುವ ಕೆಲಸದವರ ಬಳಿ ವಿಚಾರಿಸಿದಾಗ ಹಳ್ನಾಡಿನ ದೇವಾನಂದ ಶೆಟ್ಟಿ ಯವರು ಈ ಅಕ್ರಮ ದಂಧೆ ನಡೆಸಲು ಹೇಳಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ, ಹಾಗೂ ವರಾಹಿ ನದಿಯಿಂದ ಮರಳು ತೆಗೆಯಲು ತಿಳಿಸಿರುವ ಬಗ್ಗೆ ತಿಳಿದು ಬಂದಿದೆ, 
ತಕ್ಷಣ ಪೊಲೀಸರು ಸ್ಥಳಕ್ಕೆ ಗಣಿ ಅಧಿಕಾರಿಯವರನ್ನು ಬರಮಾಡಿಕೊಂಡು ವಿಚಾರಿಸಲಾಗಿ ಗಣಿ ಇಲಾಖೆಯಿಂದ ಯಾವುದೇ ಪರವಾನಿಗೆ ಇಲ್ಲ ಎಂದು ತಿಳಿಸಿರುತ್ತಾರೆ. ದೇವಾನಂದ ಶೆಟ್ಟಿ ಹಳ್ನಾಡು ಇತನು ಮರಳು ರಾಶಿ ಹಾಕಿದ ಜಾಗದ ಮಾಲಕರ ಜೊತೆ ಹಾಗೂ ಆತನ 21 ಜನ ಕೆಲಸಗಾರರಾದ ಅಮರೇಶ(27) ಕೃಪಾಲ್(32) ಪರಶುರಾಮ(35), ಪ್ರಬೀನ್ (20) ರಾಮ ಚರಣ್(35), ಸತ್ರೊಹನ್(28)
ರಾಮ ಅವತಾರ್ (21) ಬಿಮಲೇಶ್(23), ರಾಮಲಾಲ್(40) ಬೊಲಾ(23) ಸಂಜಯ(27) ಹಿರ್ದಿಯ್ರಾಮ (27) ಸರ್ವನ್(21) ಮುಖೇಶ(24),ಕರಣ್(21)ಪ್ರೀನ್ಸ್(19), ಕಿಶುನ್(19), ಸುರಾಜ (30), ನೀರಾಜ (22), . ಕಲ್ಲು (19), .ರಾಜಿವ(26) ಎಲ್ಲರ ವಿಳಾಸ: ಉತ್ತರಪ್ರದೇಶ ಇವರ ಜೊತೆ ಸೇರಿಕೊಂಡು ಯಾವುದೇ ಪರವಾನಿಗೆ ಆಗಲೀ ದಾಖಲಾತಿ ಇಲ್ಲದೇ ವರಾಹಿ ನದಿಯಿಂದ ಲಾಭಗಳಿಸುವ ಉದ್ದೇಶಗೋಸ್ಕರ ಸಂಘಟಿತವಾಗಿ ಅಕ್ರಮವಾಗಿ ಮರಳನ್ನು ತೆಗೆದು ಕಳವು ಮಾಡಿ ಸ್ವಂತ ಲಾಭಕ್ಕೋಸ್ಕ ರ ಬೇರೆಯವರಿಗೆ ಮಾರಾಟ ಮಾಡಲು ಮರಳನ್ನು ರಾಶಿ ಹಾಕುತ್ತಿರುವುದಾಗಿದೆ. ರಾಶಿ ಹಾಕಿದ ಸುಮಾರು 315 ಯುನಿಟ್ ಮರಳು ಹಾಗೂ ಮರಳು ತೆಗೆಯಲು ಬಳಸಿದ ಪೈಬರ್ ಬೋಟ್-3 , ಮರಳು ತುಂಬಲು ಬಳಸಿದ ಮರದ ಹಿಡಿ ಇರುವ ಕಬ್ಬಿಣದ ಹಾರೆ -6, ಪೈಬರ್ ಬುಟ್ಟಿ-8 ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2026 ಕಲಂ: 303(2), 112, R/w 3(5) BNS 4,4(1A) , 21 MMRD ACT ರಂತೆ ಪ್ರಕರಣ ದಾಖಲಾಗಿರುತ್ತದೆ.

Ads on article

Advertise in articles 1

advertising articles 2

Advertise under the article