BAINDURU: ಕೊರಗ ಸಮುದಾಯದ ಮನೆಯವರಿಗೆ ಕುಡಿಯುವ ನೀರಿಗಾಗಿ ಪರದಾಟ..! ಗ್ರಾಮ ಪಂಚಾಯತ್ ವಿರುದ್ಧ ನಿವಾಸಿಗಳಿಂದ ಆಕ್ರೋಶ
Wednesday, February 11, 2026
ಬೈಂದೂರು: ತಾಲೂಕಿನ ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿರೋಣಿ ಅಂಬೇಡ್ಕರ್ ಕಾಲೋನಿಯಲ್ಲಿ ವಾಸಿಸುವ ಕೊರಗ ಸಮುದಾಯದ ಮನೆಗಳಿಗೆ ಮೂಲಭೂತ ಸೌಕರ್ಯವಾದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಸಿದ್ದು ಸತ್ಯ , ಹೌದು ಕೊರಗ ಸಮುದಾಯದ ಮನೆ ಗಳು ಇರುವ ಜಾಗದಲ್ಲಿ ಸರಕಾರದ ಸಾರ್ವಜನಿಕ ಬಾವಿಯ ಇದ್ದು ಇತ್ತೀಚಿನ ದಿನದಲ್ಲಿ ಗುತ್ತಿಗೆದಾರರು ಕಾಟಚಾರ ಎಂಬಂತೆ ಕಾಮಗಾರಿ ಪ್ರಾರಂಭಿಸಿ ಬಾವಿಯ ದುರಸ್ತಿ ಕಾರ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಎಂದು ಕಾಲೋನಿಯ ನಿವಾಸಿಗಳಲ್ಲಿ ಒಬ್ಬರಾದ ಸುಪ್ರೀತಾ ಎಂಬುವರು ತಮ್ಮ ನೋವನ್ನು ಕೋಸ್ಟಲ್ ನ್ಯೂಸ್ ಜೊತೆ ಹಂಚಿಕೊಂಡಿರುವುದು ಹೇಗೆ
ಕಳೆದ ಕೆಲವು ದಿನಗಳ ಹಿಂದೆ ಬಾವಿಯ ರಿಪೇರಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಅನಿರೀಕ್ಷಿತವಾಗಿ ಕೆಲಸವನ್ನು ಗುತ್ತಿಗೆದಾರರು ಅರ್ಧದಲ್ಲೇ ನಿಲ್ಲಿಸಲಾಗಿದೆ. ಇದರಿಂದಾಗಿ ಕೊರಗ ಸಮುದಾಯದ ಮನೆಯವರಿಗೆ ಕುಡಿವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಎನ್ನಲಾಗುತ್ತಿದೆ,ಮನೆಯಲ್ಲಿ ಹೆಂಗಸರು ಮತ್ತುಸಣ್ಣ ಸಣ್ಣ ಮಕ್ಕಳಿದ್ದು ದೈನಂದಿನ ಕಾರ್ಯಗಳಿಗೆ ಹಾಗೂ ಕುಡಿಯಲು ನೀರಿಲ್ಲದೆ ಕುಟುಂಬದವರು ಪರದಾಡುವಂತಾಗಿದೆ.
ಈ ವಿಚಾರವಾಗಿ ಕೊರಗ ಕುಟುಂಬದವರು ಮರವಂತೆ ಗ್ರಾಮ ಪಂಚಾಯತ್‌ಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ಅಳಲು. "ನಾವು ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.ಅತ್ಯಗತ್ಯ ಸೇವೆಯನ್ನು ಒದಗಿಸದೆ ನಮ್ಮ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ,"ಎಂದು ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶವರಾಗಿದ್ದಾರೆ
ಪಂಚಾಯತ್ ಆಡಳಿತವು ತಕ್ಷಣವೇ ಎಚ್ಚೆತ್ತುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಸ್ಥಗಿತಗೊಂಡಿರುವ ಬಾವಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೊರಗ ಸಮುದಾಯದ ಮನೆಯವರು ಮತ್ತು ಸ್ಥಳೀಯ ನಿವಾಸಿಗಳು ಒಕ್ಕೊರಲಿನಿಂದ ಎಚ್ಚರಿಸಿದ್ದಾರೆ.
ವರದಿ: ಗೋಪಾಲ್ ಕವ್ರಾಡಿ ಕೋಸ್ಟಲ್ ನ್ಯೂಸ್ ಕುಂದಾಪುರ