ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Udupi ಉಡುಪಿ ವಕೀಲರ ಸಂಘದ ಅಧ್ಯಕ್ಷರ ವಿರುದ್ಧ ಖಂಡನಾ ನಿರ್ಣಯ..!

Udupi ಉಡುಪಿ ವಕೀಲರ ಸಂಘದ ಅಧ್ಯಕ್ಷರ ವಿರುದ್ಧ ಖಂಡನಾ ನಿರ್ಣಯ..!

ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್ ರವರು ಸಂಘದ ಅಧ್ಯಕ್ಷರಾಗಿದ್ದುಕೊಂಡು, ಸಂಘದ ಆಡಳಿತ ಮಂಡಳಿಯ ಪೂರ್ವಾನುಮತಿ ಇಲ್ಲದೇ ಮತ್ತು ಆಡಳಿತ ಮಂಡಳಿಯ ಗಮನಕ್ಕೆ ತರದೇ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ತನ್ನ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸಂಘದ ಕೆಲ ಸದಸ್ಯರುಗಳ ವಿರುದ್ಧ ವೈಯುಕ್ತಿಕ ದ್ವೇಷ ಸಾಧನೆಗಾಗಿ ಸರಕಾರಕ್ಕೆ ಸುಳ್ಳು ಹಾಗೂ ದುರುದ್ದೇಶಪೂರಿತ ದೂರುಗಳನ್ನು ಸಂಘದ ಸದಸ್ಯರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವ ಬಗ್ಗೆ ಮತ್ತು ವಕೀಲರ ಸಂಘದ ಸದಸ್ಯರಿಗೆ ಅವರ ವಕೀಲರ ಇ-ಮೇಲ್ ಸಂಬಂದಿಸಿದ ವೈಯುಕ್ತಿಕ ಪ್ರಕರಣದಲ್ಲಿ ಸದರಿ ಸದಸ್ಯರ ಹಿತಾಸಕ್ತಿಯನ್ನು ಕಾಪಾಡದೇ ಸಂಘದ ಅಧಿಕ್ರತ ಇ-ಮೇಲ  ಬಳಸಿಿಕೊಂಡು ದುರ್ಬಳಕೆ ಮಾಡಿಕೊಂಡ ಬಗ್ಗೆ ಉಡುಪಿ ವಕೀಲರ ಸಂಘದ ಆಡಳಿತ ಮಂಡಳಿಯು ದಿನಾಂಕ 10/02/2026ರ ಸಭೆಯಲ್ಲಿ ಅಧ್ಯಕ್ಷರಾದ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್ ರವರ ವಿರುದ್ದ ಖಂಡನಾ ನಿರ್ಣಯವನ್ನು ಕೈಗೊಂಡಿರುತ್ತಾರೆ.
ಮುಂದುವರೆದು ಸಂಘದ ಅಧ್ಯಕ್ಷರಾದ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್ ರವರು 'ವಕೀಲರ ಸಂಘ (ರಿ), ಉಡುಪಿ' ಅಧ್ಯಕ್ಷರೆಂಬ ನೆಲೆಯಲ್ಲಿ ಸರಕಾರದ ಯೋಜನೆಗಳ ವಿರುದ್ಧ ಮತ್ತು ಸರಕಾರಿ ಅಧಿಕಾರಿಗಳ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ ವಕೀಲರ ಸಂಘ (ರಿ). ಉಡುಪಿಯ ಯಾವುದೇ ಅನುಮತಿಯನ್ನು ಪಡೆಯದೇ ಮತ್ತು ಯಾವುದೇ ನಿರ್ಣಯ ಇಲ್ಲದೇ ಪ್ರಕರಣಗಳನ್ನು ದಾಖಲಿಸಿರುವುದು ಕಂಡು ಬಂದಿದ್ದು, ಈ ಬಗ್ಗೆ ಉಡುಪಿ ವಕೀಲರ ಸಂಘಕ್ಕೂ ಮತ್ತು ಸದರಿ ಪ್ರಕರಣಗಳಿಗೂ ಯಾವುದೇ ಸಂಬಂಧವಿರುವುದಿಲ್ಲವೆಂದು 

ಸದರಿ ಆಡಳಿತ ಮಂಡಳಿಯ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಯಿತು ಎಂದು ವಕೀಲರ ಸಂಘ (ರಿ). ಉಡುಪಿ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಚಂದ್ರಶೇಖರ್ ಶೆಟ್ಟಿ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Ads on article

Advertise in articles 1

advertising articles 2

Advertise under the article