Kundapura: : ಶಾಂತಿ ಮತ್ತು ನಿಯಮ ಪಾಲನೆಗೆ ಪೋಲಿಸ್ ಇಲಾಖೆ ಕರೆ:ಕಂಡ್ಲೂರು ಠಾಣೆಯಲ್ಲಿ ವಾಹನ ಮಾಲೀಕರು ಹಾಗೂ ಚಾಲಕರ ಸಭೆ ..!
Friday, January 9, 2026
ಕುಂದಾಪುರ: ಸಮಾಜದ ಶಾಂತಿ ವ್ಯವಸ್ಥೆ ಹಾಗೂ ರಸ್ತೆ ಸುರಕ್ಷತೆಯ ದೃಷ್ಟಿಯಿಂದ, ಕುಂದಾಪುರ ಉಪ ವಿಭಾಗದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ (ಕಂಡ್ಲೂರು) ವತಿಯಿಂದ ವಾಹನ ಮಾಲೀಕರು ಹಾಗೂ ಚಾಲಕರಿಗೆ ಮಹತ್ವದ ಕಾನೂನು ಅರಿವು ಸಂವಾದ ಚರ್ಚೆ ಕಾರ್ಯಕ್ರಮ ನಡೆಯಿತು.
ರಸ್ತೆ ಸುರಕ್ಷತಾ ಸಪ್ತಾಹ 2026 ಕಾನೂನು ಗೌರವಿಸಿ, ಸುರಕ್ಷತೆಗೆ ಆದ್ಯತೆ ನೀಡಿ ಎಂದು
ಕುಂದಾಪುರ ವೃತ್ತ ನಿರೀಕ್ಷಕರಾದ (Circle Inspector) ಶ್ರೀ ಸಂತೋಷ್ ಪಿ. ಕಾಯ್ಕಿಣಿ ಯವರು ಶುಕ್ರವಾರ ಸಂಜೆ ವೇಳೆ ಕುಂದಾಪುರ ಗ್ರಾಮಾಂತರ ಠಾಣೆ ಕಂಡ್ಲೂರು ನಲ್ಲಿ ಟಿಪ್ಪರ್ ಮಾಲೀಕರು ಹಾಗೂ ಚಾಲಕರಿಗೆ ಕಾನೂನು ಅರಿವು ಚರ್ಚೆ ನಡೆಸಿದರು, ಮುಂದಿನ ದಿನದಲ್ಲಿ ಮರಳು ಕೆಂಪು ಮಣ್ಣು ಸೇರಿದಂತೆ ಅಕ್ರಮ ಚಟುವಟಿಕೆ ನಡೆದರೆ ಸಹಿಸಲಾಗುವುದಿಲ್ಲ , ಇನ್ನು ಒಂದು ವಾರದ ಒಳಗೆ ಉಡುಪಿ SP ಹರಿರಾಮ್ ಶಂಕರ್ ರವರ ಆದೇಶದಂತೆ ಟಿಪ್ಪರ್ ಲಾರಿಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು, ಮತ್ತು ವಾಹನದ ಇನ್ಸೂರೆನ್ಸ್ ಆರ್ ಸಿ , ಚಾಲಕರ ಲೈಸನ್ಸ್ ಎಲ್ಲವೂ ಪೊಲೀಸ್ ಠಾಣೆಗೆ ನೀಡಬೇಕು ಎಂದು ಹೇಳಿದರು,
ಸಭೆಯಲ್ಲಿ ಕಂಡ್ಲೂರು ಠಾಣೆಯ ತನಿಖೆ ವಿಭಾಗದ ಅಧಿಕಾರಿ ಚಂದ್ರಕಲಾ ಪತ್ತರ್ ರವರು ಕಾರ್ಯಕ್ರಮ ನಿರೂಪಿಸಿದರು
ಸಭೆಯಲ್ಲಿ ಕಂಡ್ಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.
ಸಭೆಯ ಮುಖ್ಯಾಂಶಗಳು:
ಅತಿ ವೇಗಕ್ಕೆ ಬ್ರೇಕ್: ಜನವಸತಿ ಪ್ರದೇಶಗಳಲ್ಲಿ ವಾಹನಗಳ ವೇಗದ ಮಿತಿಯ ಬಗ್ಗೆ ಜಾಗೃತಿ.
ದಾಖಲೆಗಳ ನಿರ್ವಹಣೆ: ವಾಹನದ ಪರವಾನಗಿ ಮತ್ತು ಅಗತ್ಯ ದಾಖಲೆಗಳನ್ನು ಸದಾ ಸನ್ನದ್ಧ ವಾಗಿಟ್ಟುಕೊಳ್ಳುವ ಸೂಚನೆ.
ಪೊಲೀಸ್ ಇಲಾಖೆಯೊಂದಿಗೆ ಸಂಘರ್ಷವಿಲ್ಲದೆ, ಕಾನೂನುಬದ್ಧವಾಗಿ ವೃತ್ತಿ ನಿರ್ವಹಿಸುವ ಬಗ್ಗೆ ಚರ್ಚೆ.
"ಸುರಕ್ಷಿತ ಚಾಲನೆ, ಸುಗಮ ಸಂಚಾರ - ಇದು ನಮ್ಮೆಲ್ಲರ ಜವಾಬ್ದಾರಿ." ಪೋಲಿಸ್ ಇಲಾಖೆಯ ಈ ಜನಸ್ನೇಹಿ ಹೆಜ್ಜೆಯು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.