Aಕುಂದಾಪುರ ತಾಲೂಕಿನಾಧ್ಯಂತ ಸುರಕ್ಷತೆಯ ದೃಷ್ಟಿಯಿಂದ ವಾಹನ ತಪಾಸಣೆ, ಸಾರ್ವಜನಿಕರಿಂದ ಶ್ಲಾಘನೆ.
Friday, January 9, 2026
ಕುಂದಾಪುರ ತಾಲೂಕಿನಾಧ್ಯಂತ SP ಹರಿರಾಮ್ ಶಂಕರ್ ಅವರ ಆದೇಶದ ಮೇರೆಗೆ ಸಾರ್ವಜನಿಕರ ಹಿತ ದೃಷ್ಟಿಯಿಂದ ಅಪಘಾತವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗಿನಿಂದಲೇ ವಂಡ್ಸೆ , ನೆಂಪು ಸರ್ಕಲ್ ಹೆಮ್ಮಾಡಿ ತಲ್ಲೂರು ಕಂಡ್ಲೂರು, ಸೇರಿದಂತೆ ಹಲವು ಕಡೆ ಆರು ಚಕ್ರದ ವಾಹನ ಟಿಪ್ಪರ್ ಲಾರಿಗಳನ್ನು ತಪಾಸಣೆ ಮಾಡಲಾಗಿದೆ
ಕೆಂಪು ಮಣ್ಣು ತುಂಬಿದ ಲಾರಿ ಮತ್ತು ಮರಳು ಲಾರಿಗಳನ್ನು ತಪಾಸಣೆ ಮುಂದುವರೆದಿದೆ
ಎಸ್ಪಿ ಹರಿರಾಮ್ ಶಂಕರ್ ಇತ್ತೀಚಿಗೆ ತಲ್ಲೂರು ನೇರಳಕಟ್ಟೆ ಸಂಪರ್ಕಿಸುವ ಶೆಟ್ರುಕಟ್ಟೆ ಯಲ್ಲಿ ಸರ್ಕಾರಿ ಬಸ್ ಹಾಗೂ ಟಿಪ್ಪರ್ ಲಾರಿ ಡಿಕ್ಕಿ ಯಾದ ಪರಿಣಾಮ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಆದ ಅಪಘಾತವನ್ನು ಪರಿಗಣಿಸಿ ಜಿಲ್ಲೆಯ ಎಲ್ಲಾ ಭಾಗದ ಪೊಲೀಸ್ ಠಾಣೆಗೆ ಖಡಕ್ ಆದೇಶ ನೀಡಿದ್ದಾರೆ,
ಎಸ್ಪಿ ಯವರ ಆದೇಶದಿಂದ ಸಾಕಷ್ಟು ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಂತಾಗಿದೆ
ಎಸ್ಪಿ ಯವರ ಆದೇಶ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ