ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

A ಬೈಂದೂರು: ಯಡ್ತರೆ  KSRTC ಬಸ್ ನಿಲ್ದಾಣಕ್ಕೆ ಒಳಗೆ ಪ್ರವೇಶ ಮಾಡದೆ: ಬಸ್ ನಿಲ್ದಾಣ ಮೂಲೆಗುಂಪಾಗುತ್ತಿದೆ!!

A ಬೈಂದೂರು: ಯಡ್ತರೆ KSRTC ಬಸ್ ನಿಲ್ದಾಣಕ್ಕೆ ಒಳಗೆ ಪ್ರವೇಶ ಮಾಡದೆ: ಬಸ್ ನಿಲ್ದಾಣ ಮೂಲೆಗುಂಪಾಗುತ್ತಿದೆ!!

ಬೈಂದೂರು : ಇಲ್ಲಿನ ಯಡ್ತರೆ KSRTC ಬಸ್ ನಿಲ್ದಾಣ ಒಳಗೆ ಬರದೆ ನೂತನವಾಗಿ ನಿರ್ಮಾಣವಾದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಪ್ರಯಾಣಿಕರ ಅನುಕೂಲಕ್ಕಾಗದೆ ಮೂಲೆಗುಂಪಾಗುತ್ತಿದೆ ಎಂದು ಬೈಂದೂರು ಭಾಗದ ಜನರು ಹಾಗೂ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ,
ಹೌದು ಕಳೆದ ಹಲವು ವರ್ಷಗಳಿಂದ ಬೈಂದೂರು ಭಾಗದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಆಗಬೇಕೆಂದು ಆಗಿನ ಶಾಸಕರು ಹಾಗೂ ಪ್ರಜ್ಞಾವಂತ ನಾಗರಿಕರು ಜನಪ್ರತಿನಿಧಿಗಳು ಹಾಗೂ ಬೈಂದೂರು ಭಾಗದ ಹಿರಿಯರ ಹೋರಾಟದ ಫಲವಾಗಿ
ಕಳೆದ 7 ವರ್ಷದ ಹಿಂದೆ ಎರಡು ಬಾರಿ ಶಂಕು ಸ್ಥಾಪನೆಗೊಂಡ Ksrtc ಬಸ್ ನಿಲ್ದಾಣ ಇತ್ತೀಚಿಗೆ ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆಗೊಂಡಿತು, 

ಶಿರಸಿ ಅಂಕೋಲಾ ಕಾರವಾರ, ಹುಬ್ಬಳ್ಳಿ , ಹಾವೇರಿ, ವಾಯುವ್ಯ ಭಾಗದಿಂದ ಮಂಗಳೂರು ಉಡುಪಿ ಕಡೆಗೆ ಬರುವ ಬಸುಗಳು ಬಸ್ ನಿಲ್ದಾಣದ ಒಳಗೆ ಬಂದು ಮಂಗಳೂರು ಕಡೆ ಹೋಗುತ್ತದೆ, ಆದರೆ ಮಂಗಳೂರು ಉಡುಪಿ ಕಡೆಯಿಂದ ಬರುವ ಬಸು ಗಳು ಬೈಂದೂರಿನ ಯಡ್ತರೆ ಬಸ್ ನಿಲ್ದಾಣದ ಒಳಗೆ ಬರದೆ ಪ್ರಯಾಣಿಕರಿಗೆ ಮಾತ್ರ ಸಂಕಷ್ಟಕ್ಕೆ ಒಳಗಾಗಿದ್ದಂತು ಸತ್ಯ!!

ಮಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುವ ಬಸು ಗಳು ಬೈಂದೂರಿನ ಯಡ್ತರೆ ಬಸ್ ನಿಲ್ದಾಣದ ಬಳಿ ಸರ್ವಿಸ್ ರಸ್ತೆಯಿಲ್ಲದೆ ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಂದೂರು ತಾಲೂಕು ಕಚೇರಿ ಬಳಸಿಕೊಂಡು ಬರಲು ಮೂರರಿಂದ ನಾಲ್ಕು ಕಿಲೋಮೀಟರ್ ಬಳಸಿಕೊಂಡು ಬರಬೇಕಾದ ಕಾರಣ ಯಡ್ತರೆ ಬಸ್ ನಿಲ್ದಾಣದ ಒಳಗೆ ಪ್ರವೇಶ ಮಾಡದೆ ಬಸುಗಳು ನೇರವಾಗಿ ಸಾಗುತ್ತಿದೆ ಎಂದು ತಿಳಿದುಬಂದಿದೆ, 

ಬೈಂದೂರು ಯಡ್ತರೆ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆದ್ದಾರಿ ಪ್ರಾಧಿಕಾರ ಬಸ್ ನಿಲ್ದಾಣದ ಎದುರುಗಡೆ ಡಿವೈಡರ್ ಕೊಡದ ಕಾರಣ ಯಡ್ತರೆ ಬಸ್ ನಿಲ್ದಾಣದ ಒಳಗೆ ಪ್ರವೇಶ ಮಾಡದೆ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ 

ಈ ತರದ ಸಮಸ್ಯೆ ಹೀಗೆ ಮುಂದುವರೆದರೆ ನೂತನವಾಗಿ ಉದ್ಘಾಟನೆಗೊಂಡ ಯಡ್ತರೆ ಬಸ್ ನಿಲ್ದಾಣ 
ಸುಮಾರು 8.30 ಕೋಟಿ ಹಣ ಪ್ರಯಾಣಿಕರ ಅನುಕೂಲಕ್ಕೆ ಬಾರದೆ ಮುಂದಿನ ದಿನದಲ್ಲಿ ಬಸ್ ನಿಲ್ದಾಣ ಮೂಲೆ ಗುಂಪಾಗುವ ಸಾಧ್ಯತೆ ಇದೆ.

ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಯವರು ಹಾಗೂ ಜನಪ್ರತಿನಿಧಿಗಳು ತಕ್ಷಣ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತನಾಡಿ ಬಸ್ ನಿಲ್ದಾಣದ ಎದುರುಗಡೆ ಡಿವೈಡರ್ ನೀಡುವಂತೆ ಗಮನಹರಿಸಬೇಕು ಎಂಬುದೇ ಸಾರ್ವಜನಿಕರು ಹಾಗೂ ಪ್ರಯಾಣಿಕರ ಅಭಿಪ್ರಾಯವಾಗಿದೆ 

ಸಾರ್ವಜನಿಕರಿಗೆ ಅನುಕೂಲವಾಗುವ ಬೇಕಾಗಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಮೂಲೆಗುಂಪು ಆಗುವ ಮೊದಲೇ ಸಂಬಂಧಪಟ್ಟವರು ಗಮನ ಹರಿಸಬೇಕು ಎಂಬುವುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ.

Ads on article

Advertise in articles 1

advertising articles 2

Advertise under the article