Kundapura: BIG BREAKING NEWS ಕೋಡಿ ಭಾಗದಲ್ಲಿ ಅಪರಿಚಿತ ಮಹಿಳೆ ಯೋರ್ವಳು ಮಗು ಅಪಹರಣಕ್ಕೆ ಯತ್ನ..! ವಿಡಿಯೋ ವೈರಲ್
Saturday, January 17, 2026
ಕುಂದಾಪುರ: ಪುರಸಭೆ ವ್ಯಾಪ್ತಿಯ ಕೋಡಿ ಪರಿಸರದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ಭಿಕ್ಷೆ ಬೇಡುವ ನೆಪದಲ್ಲಿ ಮಹಿಳೆ ಯೋರ್ವಳು ಸಣ್ಣ ಮಗುವನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾಳೆ ಎಂಬ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗುತ್ತಿದೆ
ಹೌದು ಚಿಕ್ಕ ಮಗು ಒಂದು ಮನೆಯ ಕಾಂಪೌಂಡ್ ಒಳಗಡೆ ಆಟ ಆಡುತ್ತಿರುವುದನ್ನು ಗಮನಿಸಿದ ಈಕೆ ಮಗುವನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದಾಗ ಮಗು ಜೋರಾಗಿ ಕೂಗಿಕೊಂಡಾಗ ಮನೆಯ ಅಕ್ಕಪಕ್ಕದವರು ನೋಡಿದಾಗ, ಮಹಿಳೆಯು ಓಡಿದಾಗ ಬೆನ್ನಟ್ಟಿದ ಸಾರ್ವಜನಿಕರು ಮಹಿಳೆಯನ್ನು ಹಿಡಿದು ವಿಚಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ,
ತಕ್ಷಣ ಕುಂದಾಪುರ ಪೊಲೀಸ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ, ಕೂಡಲೇ ಮಹಿಳೆಯನ್ನು ಠಾಣೆಗೆ ಕರೆತಂದು ವಿಚಾರಿಸಲಾಗಿದೆ, ಸಾಗರ ಮೂಲದ ಮಹಿಳೆ ಎಂದು ಗುರುತಿಸಲಾಗಿದೆ ಮಹಿಳೆಯ ಕುಟುಂಬ ಕೋಟೇಶ್ವರ ಸಮೀಪ ಕಾಗೇರಿ ಸ್ಕೂಲಿನ ರಸ್ತೆಯ ಬದಿಯಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸ್ತವ್ಯ ಇದ್ದಾರೆ ಎಂದು ತನಿಕೆಯಿಂದ ತಿಳಿದುಬಂದಿದೆ, ಆದರೆ ಈಕೆಯ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ಇರುವುದಿಲ್ಲ ಎಂಬುದು ಕೂಡ ಪೊಲೀಸ್ ಇಲಾಖೆಯಿಂದ ತಿಳಿದು ಬಂದಿದೆ,
ಮಹಿಳೆಯನ್ನು ವಿಚಾರಿಸಿ ಕಳಿಸಲಾಗಿದೆ ಎಂಬ ಮಾಹಿತಿಯು ನಿಮ್ಮ COSTALNEWS ವರದಿಗಾರರಿಗೆ ಪೊಲೀಸ್ ಮಾಹಿತಿಯಿಂದ ಲಭ್ಯವಾಗಿದೆ