Kundapura ಕುಂದಾಪುರ:ಸಂಚಾರ ಪೊಲೀಸ್ ಠಾಣಾ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ:2026
Monday, January 19, 2026
ಕುಂದಾಪುರ: ತಾಲೂಕಿನ ಪುರಸಭೆ ವ್ಯಾಪ್ತಿಯ ಸಂಗಮ್ ಸರ್ಕಲ್ ನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2026 ರ ಅಂಗವಾಗಿ ಕುಂದಾಪುರ ಸಂಚಾರ ಪೊಲೀಸ್ ಠಾಣಾ ವತಿಯಿಂದ ಪೋಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸಂಚಾರ ನಿಯಮಗಳು ವಾಹನ ದಾಖಲಾತಿಗಳು 112 ಸಹಾಯವಾಣಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಗಳ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.
ಕುಂದಾಪುರ ಸಂಚಾರ ಪೋಲೀಸ್ ಠಾಣೆಯ ಪಿಎಸ್ಐ ಸುಧಾ ಪ್ರಭು ಮಾತನಾಡಿ ಪ್ರತಿಯೊಬ್ಬರ ಸುರಕ್ಷತೆಗೆ ಪೊಲೀಸರು ಬೇಕು. ಆದರೆ ಸಂಚಾರ ನಿಯಮ ಉಲ್ಲಂಘಿಸಿದಾಗ ದಂಡ ಹಾಕಿದರೆ ಅವರ ವಿರುದ್ಧವೇ ತಿರುಗಿ ನಿಲ್ಲುವುದು ಎಷ್ಟು ಸರಿ? ಸಂಚಾರ ನಿಯಮವನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ವಾಹನಗಳನ್ನು ಓಡಿಸುತ್ತಲೇ ಮೊಬೈಲ್ ಫೋನ್‌ನಲ್ಲಿ ಮಾತಾನಾಡುವುದು ಅಪರಾಧ. ಅಪ್ರಾಪ್ತರಿಗೆ ವಾಹನ ನೀಡುವುದು ತಪ್ಪು ಎಂದರು.
ವಾಹನದ ದಾಖಲಾತಿ ಸುರಕ್ಷಿತ ವಾಹನ ಚಾಲನೆ ಸಂಚಾರ ನಿಯಮ ರಸ್ತೆ ಬದಿಗಳಲ್ಲಿ ಅಳವಡಿಸಲಾದ ಎಚ್ಚರಿಕೆ ಹಾಗೂ ಸೂಚನಾ ಫಲಕಗಳ ಬಗ್ಗೆ ವಾಹನ ಚಾಲಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಸುಧಾ ಪ್ರಭು ಎಎಸ್ಐ ನಾಗರಾಜ ಕುಲಾಲ್, ಎ ಎಸ್ ಐ ಸುರೇಶ್ K S ಸಿಬ್ಬಂದಿಗಳಾದ ಕೇಶವ್ ಮೊಗವೀರ , ಕಿರಣ್, ಮಂಜುನಾಥ, ದೀಪು ಚಾಲಕ ಆನಂದ್ ಪೂಜಾರಿ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು