ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 Sirsi : ಮನೆಯಲ್ಲಿ ಅಡಗಿಸಿಟ್ಟ  ಶ್ರೀಗಂಧ ಜಪ್ತಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು: ಸಿಕ್ಕಿತು ಲಕ್ಷಗಟ್ಟಲೆ  ಶ್ರೀಗಂಧ  ಮರ  ವಶ!!

Sirsi : ಮನೆಯಲ್ಲಿ ಅಡಗಿಸಿಟ್ಟ ಶ್ರೀಗಂಧ ಜಪ್ತಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು: ಸಿಕ್ಕಿತು ಲಕ್ಷಗಟ್ಟಲೆ ಶ್ರೀಗಂಧ ಮರ ವಶ!!

ಮುಂಡಗೋಡ* :ಮುಂಡಗೋಡ ವಲಯದ ಇಂದೂರ ಶಾಖೆಯ ನಂದಿಕಟ್ಟಾ ಬೀಟ್ ವ್ಯಾಪ್ತಿಯಲ್ಲಿ ಬರುವ ಅಗಡಿ ಗ್ರಾಮದ ನಿವಾಸಿಯಾದ ಪರಶುರಾಮ ಲೋಕಪ್ಪ ಲಮಾಣಿ ಈತನ ಮನೆಯಲ್ಲಿ ಶ್ರೀಗಂಧ ದಾಸ್ತಾನು ಇರಿಸಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಗಿನ ಜಾವ ಅರಣ್ಯ ಇಲಾಖೆ ಸಿಬ್ಬಂದಿಗಳು ಮನೆಯನ್ನು ಪರಿಶೀಲಿಸಿದ್ದಾರೆ.


ಈ ವೇಳೆ ಮನೆಯಲ್ಲಿ 4 ಗೋಣಿ ಚೀಲಗಳಲ್ಲಿ ಕಟ್ಟಿ ಇಡಲಾಗಿದ್ದ ಅಂದಾಜು 60 ರಿಂದ 70 ಕೆ.ಜಿ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಂಡಿದ್ದು, ದಾಳಿ ವೇಳೆ ಸಿಬ್ಬಂದಿಗಳ ಕೈಗೆ ಸಿಗದೆ ಕಬ್ಬಿನ ಗದ್ದೆಯಲ್ಲಿ ಆರೋಪಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.ಶ್ರೀಗಂಧ ವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ಆರೋಪಿಯ ಮೇಲೆ ಅರಣ್ಯ ಅಪರಾಧ ಪ್ರಕರಣವನ್ನು ದಾಖಲಿಸಲಾಗಿದೆ. ಇತ್ತೀಚಿನ ಕೆಲ ತಿಂಗಳಲ್ಲಿ ಮುಂಡಗೋಡ ತಾಲೂಕಿನ ವಿವಿಧೆಡೆ ನಡೆದ ಶ್ರೀಗಂಧ ಮರಗಳ ಕಳ್ಳತನದ ಅನೇಕ ಪ್ರಕರಣ ನಡೆದ ಹಿನ್ನೆಲೆಯಲ್ಲಿ ವಿಸ್ಕೃತವಾಗಿ ತನಿಖೆ ನಡೆಸಲಾಗುವುದು ಎಂದು ಆರ್ ಎಫ್ ಒ ಅಪ್ಪಾರಾವ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ನಡುವೆ ವಲಯ ಅರಣ್ಯ ಅಧಿಕಾರಿ ಅಪ್ಪಾರಾವ್ ಇಡೀ ಪ್ರಕರಣದ ಸಮಯದಲ್ಲಿ ಅನುಪಸ್ಥಿತಿ ಚರ್ಚೆಗೆ ಒಳಪಡುತ್ತಿದೆ. ಅಲ್ಲದೆ ಆರೋಪಿತನನ್ನು ಹಿಡಿಯುವ ಅವಕಾಶಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೈ ಚೆಲ್ಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಲಿದೆ.

Ads on article

Advertise in articles 1

advertising articles 2

Advertise under the article