baindur: ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಕುಷ್ಟರೋಗದ ಕುರಿತು ಕಾರ್ಯಾಗಾರ
Thursday, December 4, 2025
ಶಿರೂರು : ಇಲ್ಲಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ಇಲ್ಲಿನ ಸಮುದಾಯ
ಆರೋಗ್ಯಾಧಿಕಾರಿ ಶ್ರೀಮತಿ ಸುಮಾ ಪಿ ಕುಷ್ಠ ರೋಗದ ಲಕ್ಷಣಗಳು, ಕಾರಣಗಳು ಚಿಕಿತ್ಸೆ, ಸಾಮಾಜಿಕ ಕಳಂಕವನ್ನು ಹೋಗಲಾಡಿಸುವ ಕುರಿತು ಸಂಕ್ಷಿಪ್ತ ವಾಗಿ ಮಾಹಿತಿ ನೀಡಿದರು ಕುಷ್ಟರೊಗವು ಗುಣಪಡಿಸುವ ಖಾಯಿಲೆ ಯಾಗಿದ್ದು ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಮುಂದೆ ಆಗಬಹುದಾದ ಗಂಭೀರ ಪರಿಣಾಮಗಳು ಮತ್ತು ಅಂಗ ವೈಫಲ್ಯತೆಯನ್ನು ತಡೆಯಬಹುದು ಈ ಖಾಯಿಲೆಯ ಆರಂಭಿಕ ಪತ್ತೆ, ಮತ್ತು
ಮುನ್ನೆಚ್ಚರಿಕೆ ಕ್ರಮ ಅರಿತು ಚಿಕಿತ್ಸೆ ಯನ್ನು ಉತ್ತೆಜಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು
ಪ್ರಾಂಶುಪಾಲ ಡಾ. ರವಿದಾಸ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು