Kundapuraಹೆಮ್ಮಾಡಿ - : ಸುಳ್ಸೆಯಲ್ಲಿ ಯಕ್ಷಗಾನ ಕಲಾವಿದರಿಗೆ ಗೌರವದ ಸನ್ಮಾನ.
Monday, December 1, 2025
ಕುಂದಾಪುರ ತಾಲೂಕಿನ :-ಹೆಮ್ಮಾಡಿ -ಸುಳ್ಸೆ - ಮಾಕಿ ಮನೆ, ಶ್ರೀಮತಿ ಲಕ್ಷ್ಮಿ ಪುಟ್ಟಿಯ್ಯಾ ಮೊಗವೀರ, ಮತ್ತು ಮಕ್ಕಳು, ಮೊಮ್ಮಕ್ಕಳು ಇವರ ಹರಿಕೆ ಸೇವೆಯ ಯಕ್ಷಗಾನ ಪ್ರದರ್ಶನದಲ್ಲಿ ಹಿರಿಯ ಕಲಾವಿದರನ್ನು ಗುರುತಿಸುವ ನಿಟ್ಟಿನಲ್ಲಿ ವಿಶೇಷವಾಗಿ ಇಬ್ಬರು ಕಲಾವಿದರನ್ನು ಸನ್ಮಾನಿಸಲಾಯಿತು
ಹೌದು ಯಕ್ಷಗಾನದ ಮಧ್ಯಂತರದಲ್ಲಿ, ಸುಳ್ಸೆ ಫ್ರೆಂಡ್ಸ್ ಯಕ್ಷಗಾನ ಕಲಾಭಿಮಾನಿ ಬಳಗ ಮತ್ತು ಅಂದಿನ ಯಕ್ಷಗಾನ ಸೇವಕರ್ತರು. ಜಂಟಿಯಾಗಿ
ಮಾರಕಟ್ಟೆ ಮೇಳದಲ್ಲಿ ಸತತವಾಗಿ 50 ವರುಷದಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾರಣಕಟ್ಟೆ ಮೇಳದ ಹಿರಿಯ ಕಲಾವಿದ ಐರಭೈಲ್ ಆನಂದ್ ಶೆಟ್ಟಿ"ಯವರನ್ನು ಮತ್ತು ಮಾರಣಕಟ್ಟೆ ಮೇಳದ ಯಕ್ಷಗಾನದ ಅಬ್ಬರದ ಮಹಿಷಾಸುರ ಖ್ಯಾತಿಯ "ನಂದೀಶ್ ಜನ್ನಾಡಿ" ಯವರನ್ನು ಕಲಾಭಿಮಾನಿಗಳು ಮತ್ತು ನೆರೆದ ಸಭೆಯಲ್ಲಿ, ಸುಳ್ಸೆ ಗ್ರಾಮಸ್ಥರು ಗೌರವಿಸಿ ಸನ್ಮಾನಿಸಿದರು
ಸನ್ಮಾನದ ವೇಳೆ ಹಿರಿಯ ಯಕ್ಷಗಾನ ಕಲಾವಿದ "ರಮೇಶ್ ಬೆಲ್ತೂರು" , ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಪುತ್ರನ್ ಸೇರಿದಂತೆ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಸುಳ್ಸೆ ಗ್ರಾಮದ ಗಣ್ಯರು ಮತ್ತು ಸಮಾಜ ಸೇವಕರ ಸಮಕ್ಷಮ ಸನ್ಮಾನಿಸಲಾಯಿತು.