Kundapura: : ಗುಜ್ಜಾಡಿ ಶಾಲೆಯ 106 ನೇ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳ ಕ್ರೀಡಾಕೂಟ ಕಾರ್ಯಕ್ರಮ
Thursday, December 18, 2025
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಇದರ 106 ನೇ ವಾರ್ಷಿಕೋತ್ಸವದ ಸಂಭ್ರಮ ಅಂಗವಾಗಿ ಗುರುವಾರ ಶಾಲೆಯ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು ,
ಡಿಸೆಂಬರ್ 24ರಂದು ಬುಧವಾರ 106 ನೇ ವಾರ್ಷಿಕೋತ್ಸವ ಸಂಭ್ರಮ ದ ಕಾರ್ಯಕ್ರಮ ನಡೆಯಲಿದೆ,
ಬೆಳಿಗ್ಗೆಯಿಂದ ರಾತ್ರಿ ಗಂಟೆ 9 ರ ವರೆಗೆ ವಿದ್ಯಾರ್ಥಿಗಳಿಂದ ನಾಟಕ ಹಾಗೂ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ
ಬೈಂದೂರು ಕ್ಷೇತ್ರ ಶಿಕ್ಷಣ ಇಲಾಖೆಯ ಸ್ವಾಧೀನದಲ್ಲಿರುವ ಗುಜ್ಜಾಡಿ ಶಾಲೆ ಇದಾಗಿದ್ದು ಈ ಶಾಲೆ ಬಹಳಷ್ಟು ಪ್ರಶಸ್ತಿ ತನ್ನ ಮಡಿಲಿಗೇರಿಸಿಕೊಂಡಿದೆ, ಮತ್ತು ರಾಷ್ಟ್ರಪ್ರಶಸ್ತಿ ಪಡೆದಿರುವ ಶಾಲೆ, ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ನೆಲೆಸಿರುತ್ತಾರೆ, ತಾವು ಕಲಿತ ಶಾಲೆಗೆ ನಾವೇನಾದರೂ ಮಾಡಬೇಕೆಂದು ಸಾಕಷ್ಟು ವಿದ್ಯಾರ್ಥಿಗಳು ಮುಂದೆ ಬಂದು ಸಹಾಯ ಮಾಡುತ್ತಿದ್ದಾರೆ ಎಂಬುವುದು ಶಾಲೆಯ ಹೆಮ್ಮೆಯ ವಿಷಯ , ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಸರಕಾರಿ ಶಾಲೆಯಲ್ಲಿ ಹೆಸರಾಂತ ಶಾಲೆ ಇದಾಗಿದೆ, ಶಾಲೆಯಲ್ಲಿ ಉತ್ತಮ ಮಟ್ಟದ ಕಟ್ಟಡ ಹಾಗೂ ಶಿಕ್ಷಕ ವೃಂದ ಹೊಂದಿದೆ, ಹಾಗೆ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಿದೆ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು,
ಕ್ರೀಡಾಕೂಟದಲ್ಲಿ ಶಾಲೆಯ SDMC ಅಧ್ಯಕ್ಷರು ಮತ್ತು ಸದಸ್ಯರು, ಶಾಲೆಯ ಹಳೆ ವಿದ್ಯಾರ್ಥಿಗಳ ಅಧ್ಯಕ್ಷರು ಸದಸ್ಯರು, ಗುಜ್ಜಡಿ ಗ್ರಾಮಸ್ಥರು ಶಾಲೆಯ ಅಭಿಮಾನಿ ಬಳಗ, ಶಿಕ್ಷಕರಂದ ಕ್ರೀಡಾಕೂಟದಲ್ಲಿ ಹಾಜರಿದ್ದರು.