Kundapura ; ಶಂಕರನಾರಾಯಣ : ಜಾಗದ ವಿಚಾರ : ವ್ಯಕ್ತಿಯೊಬ್ಬರಿಗೆ ಮರದ ಕಟ್ಟಿಗೆಯಿಂದ ಹಲ್ಲೆ…!!
Friday, December 19, 2025
ಕುಂದಾಪುರ: :
ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ಜಾಗದ ವಿಚಾರದಲ್ಲಿ ವ್ಯಕ್ತಿಯೊಬ್ಬನಿಗೆ ಮರದ ಸೋಟೆಯಿಂದ ಹಲ್ಲೆ ಮಾಡಿದ ಘಟನೆ ಸಂಭವಿಸಿದೆ.
ಹಲ್ಲೆ ಮಾಡಿದ ಆರೋಪಿಗಳು ಸುರೇಶ್ ಪೈ, ರಾಘವೇಂದ್ರ ಪೈ ಹಾಗೂ ಸುಗುಣವಪೈ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದವರು ಗಣೇಶ್ ಪೈ ಹಾಗೂ ಅವರ ಹೆಂಡತಿಯ ಮೇಲೆ ಹಲ್ಲೆಯಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.