A ಬೈಂದೂರು: ಕ್ಲಸ್ಟರ್ ಮಟ್ಟದ ಎಫ್ಎಲ್ ಎನ್ ಕಲಿಕಾ ಹಬ್ಬ
Monday, December 15, 2025
ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಎಫ್ಎಲ್ ಎನ್ ಕಲಿಕಾ ಹಬ್ಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅರಾಟೆ ಇಲ್ಲಿ ನಡೆಯಿತು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿ ಎಂಸಿ ಉಪಾಧ್ಯಕ್ಷರಾದ ಶ್ರೀ ರಾಘವೇಂದ್ರ ಪೂಜಾರಿ ಇವರು ವಹಿಸಿದ್ದರು. ದೀಕ್ಷಾ ಯೂತ್ ಫ್ರೆಂಡ್ಸ್, ಅಧ್ಯಕ್ಷರಾದ ಶ್ರೀ ಅನಿಲ್ ಮೆಂಡನ್, ರಿಂಗ್ ಫ್ರೆಂಡ್ಸ್ ಸದಸ್ಯ ಅರುಣ್ ಆಚಾರ್ಯ, ಶಾಲಾಭಿಮಾನಿ ರಾಘವೇಂದ್ರ ಆಚಾರ್ಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಮೇಶ ಆಚಾರ್ಯ , ಹೆಮ್ಮಾಡಿ ವೃತ್ತದ ಶಿಕ್ಷಣ ಸಂಯೋಜಕರಾದ ಶ್ರೀ ಯೋಗೀಶ್, ಬಿ ಆರ್ ಪಿ ಮಂಜುನಾಥ್, ಶ್ರೀ ರಾಜೇಶ್, ಶ್ರೀಮತಿ ರಾಧಿಕಾ, ಸಿ . ಆರ್.ಪಿಶ್ರೀ ಸತೀಶ್ ಕುಮಾರ್ ಶೆಟ್ಟಿ , ಶ್ರೀ ರವಿಚಂದ್ರ ,CHO ಪ್ರವೀಣ್ ಕುಮಾರ್,ಮುಖ್ಯ ಶಿಕ್ಷಕಿ ಮಾಲತಿ ಆಚಾರ್ಯ ಆಚಾರ್ಯಉಪಸ್ಥಿತರಿದ್ದರು, ಬಿ ಆರ್ ಪಿ ರಾಜೇಶ್ ಪ್ರಾಸ್ತವಿಕ ಮಾತುಗಳನ್ನಾಡಿದರು, ಶ್ರೀ ಯೋಗೀಶ್ ಮತ್ತು ಬಿ ಆರ್ ಪಿ ಮಂಜುನಾಥ್ ಸರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮವನ್ನು ಸಿಆರ್ಪಿ ಶ್ರೀಮತಿ ಯಶೋಧ ನಿರ್ವಹಿಸಿ,ಮುಖ್ಯ ಶಿಕ್ಷಕಿ ಸ್ವಾಗತಿಸಿ ಸಿಆರ್ಪಿ ಸತೀಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಕ್ಲಸ್ಟರ್ ನ ಎಲ್ಲ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.