ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Aಬೈಂದೂರು r:  ವಾಹನಗಳು ನಿಯಮ ಮೀರಿ ಕರ್ಕಶ ಹಾರನ್  ಬಳಸದಂತೆ  ಸಂಚಾರಿ ಪೊಲೀಸರು ನಿಗಾ ವಹಿಸಬೇಕು:    ಸತೀಶ್ ಕಂಚುಗೋಡು

Aಬೈಂದೂರು r: ವಾಹನಗಳು ನಿಯಮ ಮೀರಿ ಕರ್ಕಶ ಹಾರನ್ ಬಳಸದಂತೆ ಸಂಚಾರಿ ಪೊಲೀಸರು ನಿಗಾ ವಹಿಸಬೇಕು: ಸತೀಶ್ ಕಂಚುಗೋಡು

ಬೈಂದೂರು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಟ್ಕಳ ದಿಂದ ಕುಂದಾಪುರ ಕಡೆಗೆ ಹೋಗುತ್ತಿರುವ ಸಂದರ್ಭದಲ್ಲಿ ತಲ್ಲೂರಿನ ಸಮೀಪ ಲಾರಿಯೊಂದು10 ರಿಂದ 15 ಸೆಕುಂಡ್ ಗಳ ಕಾಲ ಕರ್ಕಶ ಹಾರನ್ ನ್ನು ಮಾಡಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿರುವುದನ್ನು ಗಮನಿಸಿ ಈ ರೀತಿಯ ಕರ್ಕಶ ಹಾರನ್ ಗಳನ್ನು ಬಳಸುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
   ಇತ್ತೀಚೆಗೆ ಘನವಾಹನಗಳು ಜನನಿಬಿಡ ಪ್ರದೇಶಗಳಲ್ಲಿ ಹಾಗೂ ಸರ್ಕಲ್ ಬಳಿ ವಾಹನ ಕಾಯ್ದೆ ಪಾಲನೆ ಮಾಡದೆ ಕರ್ಕಶ ಹಾರನ್ ಗಳನ್ನು ಮಾಡುವುದರ ಮೂಲಕ ಸಾರ್ವಜನಿಕರಿಗೆ ಮತ್ತು ಇತರ ವಾಹನ ಸವಾರರಿಗೆ ಕಿರಿಕಿರಿಯನ್ನು ಉಂಟುಮಾಡುವುದಲ್ಲದೆ ಶಬ್ದ ಮಾಲಿನ್ಯವನ್ನು ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ ಈ ರೀತಿಯ ಸಂಚಾರ ನಿಯಮ ಉಲ್ಲಂಘನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದನ್ನು ನಾವು ಕಾಣಬಹುದು ಹಾಗಾಗಿ ನಿಯಮ ಮೀರಿ ಕರ್ಕಶ ಹಾರನ್ ಬಳಸುತ್ತಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು ಮನವಿ ಮಾಡಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article