Udupi ಮಣಿಪಾಲ : ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರ ದಿಟ್ಟ ಕಾರ್ಯಾಚರಣೆ ಯಶಸ್ವಿ !!!
Wednesday, November 26, 2025
ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಅಕ್ರಮವಾಗಿ ಸ್ವರ್ಣ ನದಿಯಲ್ಲಿ ತೆಗೆಯುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸರು ದಾಳಿ ನಡೆಸಿದಾಗ ಮರಳು ತೆಗೆಯುತ್ತಿದ್ದ ಆರೋಪಿಗಳು ಕಾಡಿನೊಳಗೆ ಓಡಿ ಪರಾರಿಯಾಗಿದ್ದಾರೆ. ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಸಾರಾಂಶ : ದಿನಾಂಕ 25/11/2025 ರಂದು ರಾತ್ರಿ ಅನಿಲಕುಮಾರ್ ಎಮ್.ಬಿ, ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಉಡುಪಿ ತಾಲೂಕು ಹೆರ್ಗ ಗ್ರಾಮದ ಶೆಟ್ಟಿಬೆಟ್ಟು ಹೊಳೆಬಾಲಿಗು ಎಂಬಲ್ಲಿ ಸ್ವರ್ಣ ನದಿಯಲ್ಲಿ ಮರಳು ತೆಗೆಯುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ದಾಳಿ ಮಾಡಿದ್ದು ಕಾರಿನ ಬೆಳಕನ್ನು ಕಂಡ ನದಿಯಲ್ಲಿ ಮರಳನ್ನು ತೆಗೆಯುತ್ತಿದ್ದ 3-4 ಜನರು ಪಕ್ಕದ ಕಾಡಿನೊಳಗೆ ಓಡಿ ಪರಾರಿಯಾಗಿದ್ದು KA-20-A-7459 ಹಾಗೂ KL-55-A-4200ನೇ ನಂಬ್ರದ ಆರ್‌ಸಿ ಮಾಲಿಕರುಗಳು ಉಳಿದ 03-04 ಆರೋಪಿತರುಗಳೊಂದಿಗೆ ಸಂಘಟಿತರಾಗಿ ಸೇರಿಕೊಂಡು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಸರಕಾರಕ್ಕೆ ಯಾವುದೇ ರಾಯಧನವನ್ನು ಭರಿಸದೇ ಯಾವುದೇ ಪರವಾನಿಗೆ ಇಲ್ಲದೇ ಸ್ವರ್ಣ ನದಿಯಿಂದ ಮರಳನ್ನು ತೆಗೆದು ಟಿಪ್ಪರ್ ನಲ್ಲಿ ಸಾಗಾಟ ಮಾಡಿ ಮಾರಾಟ ಮಾಡುವ ಸಲುವಾಗಿ ಲಾರಿಯಲ್ಲಿ ತುಂಬಿಸಿದ್ದು ಆರೋಪಿತರುಗಳು ನದಿಯಿಂದ ತೆಗೆದು ಇರಿಸಿದ ಸುಮಾರು 3 ಯುನಿಟ್ ಮರಳು, ಹಾಗೂ ಎರಡು ವಾಹನ ಮತ್ತು ಮರಳು ದಂಧೆ ಗೆ ಬಳಸಿದ ಸಾಮಾಗ್ರಿಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 212/2025 ಕಲಂ: 303(2), 112 ಜೊತೆಗೆ 3(5) ಬಿ,ಎನ್,ಎಸ್-2023 ಮತ್ತು ಕಲಂ: 4(1)(A) 21(4) MMRD Act ರಂತೆ ಪ್ರಕರಣ ದಾಖಲಾಗಿರುತ್ತದೆ.