ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Bengaluru :ನಕಲಿ, ಅನರ್ಹ ವೈದ್ಯರನ್ನು ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ; ನೋಂದಣಿ ಇಲ್ಲದೆ ವೈದ್ಯ ವೃತ್ತಿ ಮಾಡುವವರಿಗೆ ಕಾದಿದೆ ಸಂಕಟ

Bengaluru :ನಕಲಿ, ಅನರ್ಹ ವೈದ್ಯರನ್ನು ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ; ನೋಂದಣಿ ಇಲ್ಲದೆ ವೈದ್ಯ ವೃತ್ತಿ ಮಾಡುವವರಿಗೆ ಕಾದಿದೆ ಸಂಕಟ

ಮೊದಲ ಅಪರಾಧಕ್ಕೆ 25 ಸಾವಿರ ದಂಡ, 2ನೇ ಅಪರಾಧಕ್ಕೆ 2.5 ಲಕ್ಷ ರೂ. ಮತ್ತು ಒಂದು ವರ್ಷ ಜೈಲು, ನಂತರದ ಪ್ರತಿ ಅಪರಾಧಕ್ಕೆ 3ವರ್ಷಗಳವರೆಗೆ ಜೈಲು ಶಿಕ್ಷೆ 5 ಲಕ್ಷ ರೂ. ವರೆಗೆ ದಂಡ 
ನಕಲಿ ವೈದ್ಯರು ಮತ್ತು ಅನರ್ಹ ವೈದ್ಯರನ್ನು ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯರ ನೋಂದಣಿ ಮತ್ತು ವೈದ್ಯಕೀಯ ವೈದ್ಯರ ವಿವಿಧ ನಿಬಂಧನೆಗಳ ಕಾಯ್ದೆ 1961 ರ ಪ್ರಕಾರ, ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ನೋಂದಣಿ ಇಲ್ಲದೆ ವೈದ್ಯ ವೃತ್ತಿ ಮಾಡುವ ಯಾವುದೇ ವ್ಯಕ್ತಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಈ ಕುರಿತ ಮೊದಲ ಅಪರಾಧಕ್ಕೆ 25,000 ರೂ.ಗಳವರೆಗೆ ದಂಡ,ಎರಡನೇ ಅಪರಾಧಕ್ಕೆ 2.5 ಲಕ್ಷ ರೂ.ಗಳವರೆಗೆ ಮತ್ತು ಒಂದು ವರ್ಷ ಜೈಲು ಶಿಕ್ಷೆ ಮತ್ತು ನಂತರದ ಪ್ರತಿ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯೊಂದಿಗೆ 5 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದು ಎಂದು ತಿಳಿಸಿದೆ.
ನೋಂದಣಿಯಾಗದ ಅಥವಾ ನಕಲಿ ವೈದ್ಯರ ವಿರುದ್ಧ ತಪಾಸಣೆ ಮತ್ತು ಕ್ರಮ ಕೈಗೊಳ್ಳಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಕಾರ್ಯಪಡೆಯಲ್ಲಿ ಉಪ ಆಯುಕ್ತರು, ಹಿರಿಯ ಪೊಲೀಸ್‌ ಅಧಿಕಾರಿ, ಜಿಲ್ಲಾ ಆಯುಷ್ ಅಧಿಕಾರಿ, ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಮಂಡಳಿಯ ರಿಜಿಸ್ಟ್ರಾರ್, ಜಿಲ್ಲಾ ಮಟ್ಟದ ನಾಮನಿರ್ದೇಶಿತ ವಕೀಲರು ಮತ್ತು ನಾಮನಿರ್ದೇಶಿತ ಸಮಾಜ ಸೇವಕರು ಇರಲಿದ್ದಾರೆ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಮತ್ತು ರಾಜ್ಯ ಸರ್ಕಾರಕ್ಕೆ ಮಾಸಿಕ ವರದಿಗಳನ್ನು ಸಲ್ಲಿಸುವುದು ಈ ಕಾರ್ಯಪಡೆಯ ಕರ್ತವ್ಯವಾಗಿದೆ.

ಅರ್ಹ ವೈದ್ಯರು ಅಥವಾ ಅರೆವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ, 2007 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಅಂತಹ ಸಂಸ್ಥೆಗಳು ತಕ್ಷಣ ಬಂದ್‌, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, 1ಲಕ್ಷ ರೂ.ವರೆಗೆ ದಂಡ ಎದುರಿಸಲಿವೆ ಎಂದು ತಿಳಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯು ನಿಯಮ ಉಲ್ಲಂಘಿಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ



Ads on article

Advertise in articles 1

advertising articles 2

Advertise under the article