ದೆಹಲಿ ಸ್ಫೋಟದ ನಡುವೆಯೂ ಪ್ರಧಾನಿ ಮೋದಿ ಭೂತಾನ್ ಪ್ರವಾಸ: ರಾಷ್ಟ್ರೀಯ ಆದ್ಯತೆಯಾ? ರಾಜಕೀಯ ವಲಯದಲ್ಲಿ ಚರ್ಚೆ!!
Tuesday, November 11, 2025
ರಾಜಧಾನಿ ದೆಹಲಿಯ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಬಳಿ ನಡೆದ ಭೀಕರ ಕಾರು ಸ್ಫೋಟದಲ್ಲಿ 12 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನ ಗಾಯಗೊಂಡು 16 ಗಂಟೆ ಕಳೆದಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಭೂತಾನ್‌ಗೆ 2 ದಿನಗಳ ರಾಜ್ಯ ಭೇಟಿ ಆರಂಭಿಸಿದ್ದಾರೆ. ಈ ನಡೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.ನಿನ್ನೆ ರಾತ್ರಿ 6-52ಕ್ಕೆ ನಡೆದ ಸ್ಫೋಟದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 8 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.
“ರಾಷ್ಟ್ರ ದುಃಖದಲ್ಲಿ ಮುಳುಗಿರುವಾಗ ಪ್ರಧಾನಿ ವಿದೇಶ ಪ್ರವಾಸ ಮಾಡುತ್ತಿರುವುದು ದೇಶದ ಆದ್ಯತೆಯ ಕೊರತೆಯನ್ನು ತೋರಿಸುತ್ತದೆ” ಎಂದು ಕಾಂಗ್ರೆಸ್ ನ ರಣದೀಪ್ ಸುರ್ಜೆವಾಲಾ ಟೀಕಾ ಪ್ರಹಾರ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಶೈನಾ ಎನ್‌ಸಿ ಪ್ರತಿಕ್ರಿಯಿಸಿ, “ಈ ಭೇಟಿ ಆರು ತಿಂಗಳ ಹಿಂದೆಯೇ ನಿಗದಿಯಾಗಿತ್ತು.
ರಾಷ್ಟ್ರೀಯ ದುರಂತಕ್ಕೆ ರಾಜತಾಂತ್ರಿಕ ಸಂಬಂಧಗಳನ್ನು ತ್ಯಜಿಸುವುದು ಸಾಧ್ಯವಿಲ್ಲ. ಪ್ರಧಾನಿ ದೇಶದೊಳಗಿನ ಪ್ರತಿ ಬೆಳವಣಿಗೆಯನ್ನೂ ನಿಗಾ ವಹಿಸುತ್ತಿದ್ದಾರೆ” ಎಂದಿದ್ದಾರೆ.
ಮಾಜಿ ರಾಯಭಾರಿ ಕೆ.ಸಿ. ಸಿಂಗ್ “ಭಾರತ-ಭೂತಾನ್ ಸಂಬಂಧ ಚೀನಾ ಒತ್ತಡದ ನಡುವೆ ಅತ್ಯಂತ ಮಹತ್ವದ್ದಾಗಿದೆ.ಈ ಭೇಟಿಯನ್ನು ರದ್ದುಗೊಳಿಸಿದ್ದರೆ ದಕ್ಷಿಣ ಏಷ್ಯಾದಲ್ಲಿ ಭಾರತದ ವಿಶ್ವಾಸಾರ್ಹತೆಗೆ ಧಕ್ಕೆ ಬರುತಿತ್ತು ಎಂದಿದ್ದಾರೆ. ಈ ನಡುವೆ ಭದ್ರತಾ ವಿಶ್ಲೇಷಕ ಲೆಫ್ಟಿಂನೆಂಟ್ ಜನರಲ್ (ನಿವ್ರತ್ತ) ಡಿ. ಬಿ.ಶೇಕಾಟ್ಕರ್ ರಾಷ್ಟೀಯ ದುರಂತ ಸಂದರ್ಭದಲ್ಲಿ ಪ್ರಧಾನಿ ದೇಶದೊಳಗೆ ಇರಬೇಕಾಗಿತ್ತು.ಇದು ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.