ಬೈಂದೂರು: ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಕನಕದಾಸ ಜಯಂತಿ ಆಚರಣೆ
Friday, November 7, 2025
ಬೈಂದೂರು: ತಾಲೂಕಿನ ಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಸಂತ ಶ್ರೇಷ್ಠರಾದ ಕನಕದಾಸರ 538ನೇ ಜಯಂತಿಯನ್ನು ಆಚರಿಸಲಾಯಿತು ಶಿಕ್ಷಕಿಯರು ಕನಕದಾಸರ ಭಜನೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಗೊಂಡಿತು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಡಾ.ರವಿದಾಸ್ ಶೆಟ್ಟಿ ಮಾತನಾಡಿ ಭೌತಿಕ ಸಂಗತಿಗಳಲ್ಲಿ ಆಡಂಬರದ ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡದೇ ಭಗವಂತನು ಎಲ್ಲರನ್ನು ನೋಡಿಕೊಳ್ಳುತ್ತಾನೆ ನಮ್ಮೊಳಗಿನ ಅಹಂಕಾರ ಬಿಡಬೇಕು ಎಂದು ಸಾರಿವದವರು ಕನಕರು, ಶಾಂತಿ ಹಾಗೂ ಯುದ್ಧ ಎರಡು ಕಾಲಘಟ್ಟದ ಸಮಾಜಕ್ಕೆ ಕನಕದಾಸರ ಸಂದೇಶ ಪರಿಹಾರ ನೀಡಲಿದೆ ಕನಕನಾಯಕ
ಎನ್ನುವ ಹೆಸರಿನ ಮೂಲಕ ಗುರುತಿಸಿಕೊಂಡು ಪರಿವರ್ತನೆಗೊಂಡು ಕನಕದಾಸರಾದ ಸಂತಶ್ರೇಷ್ಠರು ಸಾರಿದ ಸಮಾನತೆಯ ಸರಳ ಬದುಕನ್ನು ನಾವೆಲ್ಲರೂ ಪಾಲನೆ ಮಾಡಬೇಕು ಸಮಾಜದ ಅಸಮಾನತೆ ತೊಲಗಿಸಲು ಕೀರ್ತನೆಯನ್ನು ಜಗತ್ತಿಗೆ ಸಾರಿದ ಕನಕದಾಸರು ಕುಲ ಮತ್ತು ಜಾತಿಯ ನಿರ್ಬಂಧಗಳ ನಡುವಿನ ಸಾಕಷ್ಟು ಕಲಹಗಳನ್ನು ಕೊನೆಗೊಳಿಸಲು ಅಡಿಪಾಯ ಹಾಕಿಕೊಟ್ಟರು ಭಕ್ತಿ ಪಂಥದ ಮುಖ್ಯ ಹರಿದಾಸರು, ದಾಸ ಪರಂಪರೆಯಲ್ಲಿ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾದ ಕನಕದಾಸರ ಜನ್ಮದಿನವನ್ನು ನಾವು ಕನಕದಾಸ ಜಯಂತಿ ಎಂದು ಆಚರಿಸುತ್ತೇವೆ ಕನಕದಾಸರನ್ನು ನಾವು ಪೂಜ್ಯಸಂತ ಮತ್ತು ತತ್ವಜ್ಞಾನಿಯಾಗಿ ನೋಡುತ್ತೇವೆ ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ ಅವರ ಜೀವನವನ್ನು ಬದ್ಧತೆ, ಸಮಾಜ ಸುಧಾರಣೆ ಮತ್ತು ಸಾಹಿತ್ಯ ಪ್ರತಿಭೆಯ ಸಾಕಾರವಾಗಿ ನೋಡುತ್ತೇವೆ ಎಂದರು
ಶಿಕ್ಷಕಿ ನವ್ಯ ಕನಕದಾಸರ ಜೀವನದ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು
ಶಿಕ್ಷಕಿ ದೇವಕಿ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಶಿಕ್ಷಕಿ ವೇದಾ ವಂದಿಸಿದರು