ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 ಪ್ರಪ್ರಥಮ ಬಾರಿಗೆ  ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ  ಬಾಕ್ಸಿoಗ್ ಪಂದ್ಯಾಟ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನಲ್ಲಿ ಉದ್ಘಾಟನೆ

ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಬಾಕ್ಸಿoಗ್ ಪಂದ್ಯಾಟ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನಲ್ಲಿ ಉದ್ಘಾಟನೆ

ಕ್ರೀಡೆಯಿಂದ ಬದುಕು ಸಾಗಿಸುವ ಕಟ್ಟಿಕೊಳ್ಳಲು ಸಾಧ್ಯ-ರಾಷ್ಟ್ರ ಮಟ್ಟದ ಕ್ರೀಡಾಪಟು ಘ್ರನ್ಮೇಶ್ ಅಭಿಮತ
ಕ್ರೀಡೆಗಳಿಂದ ಬದುಕು ಕೆಟ್ಟಿಕೊಳ್ಳಲು ಸಾಧ್ಯ-ಘ್ರನ್ಮೇಶ್ ಅಭಿಮತ


ಹೆಮ್ಮಾಡಿ : ಅಚಲವಾದ ಛಲ, ಆತ್ಮ ವಿಶ್ವಾಸವಿದ್ದರೆ ಒಬ್ಬ ಕ್ರೀಡಾಪಟು ಅತ್ಯುತ್ತಮ ಸಾಧನೆ ಮಾಡಿ ಕ್ರೀಡೆಗಳಿಂದ ಬದುಕು ಕಟ್ಟಿಕೊಳ್ಳುಲು ಎಂದು ರಾಷ್ಟ್ರ ಮಟ್ಟದ ಕರಾಟೆ ಚಾoಪಿಯನ್ ಘ್ರನ್ಮೇಶ್ ಅಭಿಪ್ರಾಯಿಸಿದರು.
ಅವರು ಶನಿವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇವರ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಕ್ರೀಡಾoಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಬಾಕ್ಸಿoಗ್ ಪಂದ್ಯಾಟದ ಮುಖ್ಯ ಅಭ್ಯಾಗತರಾಗಿ ಆಗಮಿಸಿ ವಿದ್ಯಾರ್ಥಿಗಳು ಕ್ರೀಡೆಯಿಂದ ಆರೋಗ್ಯವಂತರಾಗಿ ಎಂದು ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೈಹಿಕ ಬಲವರ್ಧನೆ ಗಾಗಿ ಕ್ರೀಡೆಗಳ ಪಾತ್ರ ಅತ್ಯಮೂಲ್ಯವಾದುದು.ಏಕತೆ ಮತ್ತು ಐಕ್ಯತೆ ಸಾರಿ ನಾವೆಲ್ಲಾ ಒಂದೆ ಎಂಬ ಭಾವನೆ ಮೂಡಿಸುತ್ತದೆ.ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ರಮೇಶ್ ಪೂಜಾರಿ,ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರಾದ ಜೀವನ್ ಕುಮಾರ್ ಶೆಟ್ಟಿ, ಜನತಾ ಪ್ರೌಢ ಶಾಲೆ ಹೆಮ್ಮಾಡಿಯ ಪ್ರಭಾರ ಮುಖ್ಯ ಶಿಕ್ಷಕರಾದ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಉದಯ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article