ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಬೈಂದೂರು;  ಗುಜ್ಜಾಡಿಯಲ್ಲಿ ಅಕ್ರಮ ಕೆಂಪು ಮಣ್ಣು ದಂಧೆ : ಲಾರಿ ತಡೆದು ನಿಲ್ಲಿಸಿದ  ನಿವಾಸಿಗಳು

ಬೈಂದೂರು; ಗುಜ್ಜಾಡಿಯಲ್ಲಿ ಅಕ್ರಮ ಕೆಂಪು ಮಣ್ಣು ದಂಧೆ : ಲಾರಿ ತಡೆದು ನಿಲ್ಲಿಸಿದ ನಿವಾಸಿಗಳು

ಬೈಂದೂರು: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಹೆಬ್ಬಾರ್ ಬೈಲು ಎಂಬಲ್ಲಿ ಆದಿತ್ಯವಾರ ಬೆಳ್ಳಂ ಬೆಳಗೆ ಅಕ್ರಮ ಕೆಂಪು ಮಣ್ಣಿನ ಲಾರಿಗಳ ಸಂಚಾರ ಆಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಕ್ರಮ ಕೆಂಪು ಮಣ್ಣಿನ ದಂಧೆ ಕೋರರ ವಿರುದ್ಧ ಕೆಂಪು ಮಣ್ಣು ಸಾಗಿಸುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ ಆಕ್ಷೇಪ ವ್ಯಕ್ತಪಡಿಸಿದರು 
ಈ ವೇಳೆ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಸ್ಥಳಕ್ಕೆ ಆಗಮಿಸಿ ಈ ಕ್ಷಣದಿಂದಲೇ ನಿಲ್ಲಿಸಬೇಕು ಇನ್ನು ಮುಂದೆ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಕೆಂಪು ಮಣ್ಣು ದಂಧೆ ನಡೆಯದಂತೆ ಆಗಬೇಕು, ರಸ್ತೆಗಳೆಲ್ಲವೂ ಇಂಥವರಿಂದಲೇ ಹಾಳಾಗಿ ಹೋಗಿದೆ ಇದರಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು   ಜೊತೆಯಲ್ಲಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಶೇಖರ್ ದೇವಾಡಿಗ ಇದ್ದರು
ಇತ್ತೀಚಿನ ದಿನಗಳಲ್ಲಿ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಹಲವು ಕಡೆ ಅಕ್ರಮ ಕೆಂಪು ಮಣ್ಣು ದಂಧೆ ನಡೆಯುತ್ತಿರುವ ಬಗ್ಗೆ ಸಮಗ್ರ ವರದಿ ಆಗುತ್ತಿದ್ದರು ಸಂಬಂಧಪಟ್ಟ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ನಮಗೆ ಸಂಬಂಧವೇ ಇಲ್ಲ ಎಂಬಂತೆ ನಾಟಕವಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದರು, 

ತಕ್ಷಣ ಉಡುಪಿ ಜಿಲ್ಲಾಧಿಕಾರಿಗಳು ಕುಂದಾಪುರ ಹಾಗೂ ಬೈಂದೂರು ಕಡೆ ಗಮನ ಹರಿಸಬೇಕು ಎಂಬುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ 

ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಕ್ರಮ ಮಣ್ಣು ದಂಧೆ ಸಂಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮುಂದಿನ ದಿನದಲ್ಲಿ ಇನ್ನಷ್ಟು ರಸ್ತೆಗಳು ಹೋಂಡಾ ಗುಂಡಿ ಬಿದ್ದು ಸಾಕಷ್ಟು ಸಾವು ನೋವು ಸಂಭವಿಸುವ ಸಾಧ್ಯವಿದೆ ಹಾಗಾಗಿ ಸಂಚಾರ ಉಲ್ಲಂಘನೆ ನಿಯಮ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ 

ಕುಂದಾಪುರ ಭಾಗದ ಕುಂದಾಪುರ: ಕಂಡ್ಲೂರ ನಲ್ಲಿ ಹಗಲು ರಾತ್ರಿ ಎನ್ನದೆ ನಡೆಯುತ್ತಿದೆ ಅಕ್ರಮ ಕೆಂಪು ಮಣ್ಣಿನ ದಂಧೆ 

ಕುಂದಾಪುರ ತಾಲೂಕಿನ ಕಂಡ್ಲೂರ ಗ್ರಾಮದಲ್ಲಿ ದಿನನಿತ್ಯ ರಾತ್ರಿ ಹಗಲು ಎನ್ನದೆ ಕೆಂಪು ಮಣ್ಣಿನ ದಂಧೆ ನಿರಾಳವಾಗಿ ನಡೆಯುತ್ತಿದೆ
 ಕಂಡ್ಲೂರ ಅಂಪಾರ ಸಿದ್ದಾಪುರ ಮುಖ್ಯರಸ್ತೆಯಲ್ಲಿ ಓಡಾಡಲು ಕಷ್ಟ ಸಾಧ್ಯವಾಗಿದೆ ಎನ್ನಲಾಗುತ್ತಿದೆ 
ತಕ್ಷಣ ಅಕ್ರಮ ಕೆಂಪು ಮಣ್ಣು ದಂಧೆ ನಡೆಸುವರೆ ವಿರುದ್ಧ ಕ್ರಮ ಕೈಗೊಳ್ಳುವರೇ ಎಂಬ ಪ್ರಶ್ನೆ !!

Ads on article

Advertise in articles 1

advertising articles 2

Advertise under the article