ಬೈಂದೂರು: ಗಂಗೊಳ್ಳಿಯಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಪಡಿಸುವಂತೆ; ವೀರ ಸಾವರ್ಕರ್ ಬಳಗದ ಕಾರ್ಯಕರ್ತರ ಮನವಿ
Tuesday, October 14, 2025
ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಗಂಗೊಳ್ಳಿ ಗ್ರಾಮದಲ್ಲಿ ಅರ್ಧಕ್ಕೆ ನಿಂತ ಗಂಗೊಳ್ಳಿ ಮಲ್ಯರಬೆಟ್ಟು ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಪೂರ್ಣಗೊಳಿಸಿ ಎಂದು ಆಗ್ರಹಿಸಿ ವೀರ ಸಾವರ್ಕರ್ ಬಳಗದ ಕಾರ್ಯಕರ್ತರು ಸೋಮವಾರ ಗಂಗೊಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅಭಿವೃದ್ಧಿ ಅಧಿಕಾರಿ -ಮನವಿಯಲ್ಲಿ ಅಭಿವೃದ್ಧಿ ಆಗದಿದ್ದಲ್ಲಿ ವೀರ ಸಾವರ್ಕರ್ ಬಳಗದ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಬರಹ ನೋಡಿ ಕೆಂಡಾಮಂಡಲವಾಗಿ ಇದೆನ್ನೆಲ್ಲ ಹಾಕ್ಬೇಡಿ, ಪ್ರತಿಭಟನೆ ಮಾಡಲು ಅವಕಾಶವೇ ಇಲ್ಲ, ನೀವು ಇದೆನ್ನೆಲ್ಲ ಮಾಡಿದ್ರೇ ಕೇಸ್ ಹಾಕಲಾಗುತ್ತದೆ ಎಂದು ಬೆದರಿಕೆ ಹಾಕಿದ್ದು
ಅಭಿವೃದ್ಧಿ ಅಧಿಕಾರಿಗಳ ಈ ನಡೆಗೆ ವೀರ ಸಾವರ್ಕರ್ ಬಳಗ ಬಲವಾಗಿ ಖಂಡನೆ ವ್ಯಕ್ತಪಡಿಸಿದೆ, ಇಂತಹ ಅಧಿಕಾರಿಗಳು ಗ್ರಾಮದ ವಿಷಯದಲ್ಲಿ ಚರ್ಚೆ ಮಾಡಿದ್ರೆ ಕೇಸ್ ಹಾಕುವ ಭಯದ ವಾತಾವರಣ ಸೃಷ್ಟಿ ಮಾಡುತ್ತಾರೆ, ಇವರಿಂದ ಅಭಿವೃದ್ಧಿ ಕಾರ್ಯ ಕಾಣಲು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಗುಸು ಗುಸು ಮಾತು ಹರಿದಾಡುತ್ತಿದೆ,
ಹಿಂದೂ ರುದ್ರಭೂಮಿ ಅಭಿವೃದ್ಧಿ ಆಗದೇ ಇದ್ದರೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಶಿವ ನಾಮಸ್ಮರಣೆ ಯೊಂದಿಗೆ ನಮ್ಮ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಸಲಾಗುವುದೆಂದು ವೀರ ಸಾವರ್ಕರ್ ಬಳಗದ ಕಾರ್ಯಕರ್ತರು ಮಾಧ್ಯಮಕ್ಕೆ ತಿಳಿಸಿದ್ದಾರೆ,
ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರು ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ