ಅಭಿಮಾನಿಗಳಿಂದ ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ ಆಚರಣೆ
Sunday, October 19, 2025
ಮಲೈ : ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ವಿವಿಧ ಸಂಘ ಸಂಸ್ಥೆಗಳು, ಪ್ರಮುಖ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಅವರ ಮನೆಗೆ ಭೇಟಿ ನೀಡಿ ಪ್ರಮೋದ್ ಮಧ್ವರಾಜ್ ಅವರಿಗೆ ಶುಭಾಶಯ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸವಿತಾ, ಪವಿತ್ರ ಶೆಟ್ಟಿ, ಮುಕ್ತ ಸಾವಂತ್, ವಿಜಯ, ರಾಧಾ, ಶಾರದಾ, ಶೋಭಾ, ಮಂಜುಳಾ, ಮಾಧವಿ, ಪುಷ್ಪ ವಿಶಾಲಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಮೋದ್ ಮಧ್ವರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗವು ಮಣಿಪಾಲ ಆಸ್ಪತ್ರೆ, ಕುಂದಾಪುರ, ಕುಮಟ, ಇಳಕಲ್ ಮೂಡಬಿದ್ರೆ, ಶಿರಸಿ, ಹಾವೇರಿ, ಸೇರಿದಂತೆ ವಿವಿಧ ಕಡೆಗಳಲ್ಲಿ ರಕ್ತದಾನ ಶಿಬಿರಗಳು, ವೃದ್ಧಾಶ್ರಮಗಳಿಗೆ ಕೊಡುಗೆಗಳನ್ನು ನೀಡಿದೆ. ಜಿಲ್ಲೆ ಹಾಗೂ ಹೊರಜಿಲ್ಲೆಯ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು