ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಅಥ್ಲೆಟಿಕ್ ಪಂದ್ಯಾಟದಲ್ಲಿ ದಾಖಲೆ 10 ಚಿನ್ನದ ಪದಕಗಳನ್ನು  ಮುಡಿಗೇರಿಸಿಕೊಂಡು ವೈಯಕ್ತಿಕ ಹಾಗೂ ಸಮಗ್ರ ಚಾಂಪಿಯನ್ ಶಿಪ್  ಪಡೆದ ಜನತಾದ ವಿದ್ಯಾರ್ಥಿಗಳು

ಅಥ್ಲೆಟಿಕ್ ಪಂದ್ಯಾಟದಲ್ಲಿ ದಾಖಲೆ 10 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ವೈಯಕ್ತಿಕ ಹಾಗೂ ಸಮಗ್ರ ಚಾಂಪಿಯನ್ ಶಿಪ್ ಪಡೆದ ಜನತಾದ ವಿದ್ಯಾರ್ಥಿಗಳು

ಕಿರಿಮಂಜೇಶ್ವರ: ಅಕ್ಟೋಬರ್ 25 ರಂದು ನಡೆದ ಕಂಬದಕೋಣೆ ಹೋಬಳಿ ಮಟ್ಟದ ಅಥ್ಲೆಟಿಕ್ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರದ ವಿದ್ಯಾರ್ಥಿಗಳು 10 ಚಿನ್ನದ ಪದಕ, 4 ಬೆಳ್ಳಿಯ ಪದಕ ಮತ್ತು 4 ಕಂಚಿನ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 
ಪ್ರೀತಮ್(8ನೇ ತರಗತಿ)3 ಚಿನ್ನದ ಪದಕ, ರಜತ್ ಆರ್ ಪಿ(8ನೇ ತರಗತಿ)2ಚಿನ್ನ ಮತ್ತು 1ಬೆಳ್ಳಿಯ ಪದಕ, ಅಬ್ದುಲ್ ಶೈಹನ್(8ನೇ ತರಗತಿ)2ಚಿನ್ನ ಮತ್ತು 1ಬೆಳ್ಳಿ, ಮನ್ವಿತ್( 8ನೇ ತರಗತಿ)1 ಚಿನ್ನ, ರಜತ್ ಎಲ್ ಪಿ(8ನೇ ತರಗತಿ)1 ಚಿನ್ನ, ಬೆಳ್ಳಿ ಮತ್ತು ಕಂಚು, ಅಪೇಕ್ಷಾ(8ನೇ ತರಗತಿ)1 ಚಿನ್ನ ಮತ್ತು ಕಂಚು, ಚಾರ್ವಿ (7ನೇ ತರಗತಿ)1 ಬೆಳ್ಳಿ , ಪ್ರೀತಮ್ ಆರ್(8ನೇ ತರಗತಿ) ಕಂಚಿನ ಪದಕಗಳನ್ನು ಪಡೆದಿರುತ್ತಾರೆ.

14ರ ವಯೋಮಾನದ ಹುಡುಗರ ವಿಭಾಗದಲ್ಲಿ ಅಬ್ದುಲ್ ಶೈಹನ್ ವೈಯಕ್ತಿಕ ಚಾಂಪಿಯನ್ ಹಾಗೂ ಸಮಗ್ರ ಚಾಂಪಿಯನ್ ಆಗಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪಡೆದುಕೊಂಡಿದೆ.

 
 ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ,ಮುಖ್ಯ ಶಿಕ್ಷಕಿ, ಬೋಧಕ/ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article