ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಚಿನ್ನ ಖರೀದಿ ಮಾಡಿ ಹಣ ನೀಡದೆ ವಂಚನೆ ಪ್ರಕರಣ – ಆರೋಪಿ ಬಂಧನ

ಚಿನ್ನ ಖರೀದಿ ಮಾಡಿ ಹಣ ನೀಡದೆ ವಂಚನೆ ಪ್ರಕರಣ – ಆರೋಪಿ ಬಂಧನ

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಅಮಾಸೆಬೈಲು: ಜ್ಯುವೆಲ್ಲರಿ ಶಾಪ್ ಯಿಂದ ಚಿನ್ನ ಖರೀದಿಸಿ ಹಣ ಕೊಡದೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಅಮಾಸೆಬೈಲು ಪೊಲೀಸರು ಎಡೆಮುರಿ ಕಟ್ಟಿ ಬಂದಿಸಲಾಗಿದೆ

ಹೊಸಂಗಡಿಯ ಶ್ರೀಕೃಷ್ಣ ಜ್ಯುವೆಲ್ಲರಿಯಿಂದ 2024ರ ನ.3ರಂದು ಸಂತೋಷ ಎಂಬಾತ ಹೆಸರು ಹೇಳಿಕೊಂಡು ಕಾರಿನಲ್ಲಿ ಬಂದ ವ್ಯಕ್ತಿ ಗಿಪ್ಟ್ ಕೊಡುವ ಬಗ್ಗೆ 30 ಸಾವಿರ ರೂ. ಮೌಲ್ಯದ 2 ಚಿನ್ನದ ಉಂಗುರಗಳನ್ನು ಖರೀದಿ ಮಾಡಿದ್ದನು . ಹಣವನ್ನು ವರ್ಗಾವಣೆ ಮೂಲಕ ಹಾಕಿರುವುದಾಗಿ ಮೊಬೈಲ್ ಪೋನ್ ತೋರಿಸಿ ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದನು.
ಆದರೆ ಹಣ ಖಾತೆಗೆ ಜಮಾ ಆಗದ ಬಗ್ಗೆ ಆತನಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದು, ಆತ ನಾಳೆ ಕೊಡುವುದಾಗಿ ಹೇಳಿ ವಂಚಿಸಿದ್ದನು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಅಮಾಸೆ ಬೈಲು ತಾಣ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿ ಪ್ರವೀಣ್ ಎಂಬಾತನನ್ನು ಸೆ.29ರಂದು ಬಂಧಿಸಿ, ಕಾರು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. 

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಮಾಸೆ ಬೈಲು ಪೊಲೀಸ್ ಠಾಣಾ ಪೊಲೀಸರ ಚುರುಕಿನ ಕಾರ್ಯಾಚರಣೆ ಯಿಂದ ಆರೋಪಿ ಬಂಧನವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ,

Ads on article

Advertise in articles 1

advertising articles 2

Advertise under the article