ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಕುಂದಾಪುರ:  PWD ರಸ್ತೆಯ ಬದಿಯಲ್ಲಿ ಅವಜ್ಞಾನಿಕ ಪೈಪ್ ಲೈನ್ ಕಾಮಗಾರಿ;  ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ*

ಕುಂದಾಪುರ: PWD ರಸ್ತೆಯ ಬದಿಯಲ್ಲಿ ಅವಜ್ಞಾನಿಕ ಪೈಪ್ ಲೈನ್ ಕಾಮಗಾರಿ; ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ*

ಕುಂದಾಪುರ: ತಾಲೂಕಿನ ಹಲವು ಕಡೆಗಳಲ್ಲಿ ಶುಕ್ರವಾರದಂದು ಬೆಳಿಗ್ಗೆ ವೇಳೆಯಲ್ಲಿ ಹಟ್ಟಿಯಂಗಡಿ ಮುಖ್ಯ ರಸ್ತೆ, ಹಾಗೂ BH ಜಪ್ತಿ ಹುಣಸಮಕ್ಕಿ ಸಂಪರ್ಕಿಸುವ PWD ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಗಳ ಬದಿಯಲ್ಲಿ ಕುಡಿಯುವ ನೀರಿನ ಹೆಸರಿನಲ್ಲಿ ಅವಜ್ಞಾನಿಕ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ ಎನ್ನಲಾಗಿದೆ.
ಹೌದು ಕುಂದಾಪುರ ತಾಲೂಕಿನ ಹಲವು ಕಡೆಗಳಲ್ಲಿ PWD ರಸ್ತೆಯ ಬದಿಯಲ್ಲಿ ಅವಜ್ಞಾನಿಕ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳೀಯರು ಕೋಸ್ಟಲ್ ನ್ಯೂಸ್ ಮಾಧ್ಯಮದ ವರದಿಗಾರರಿಗೆ ಹೇಳಿದ ತಕ್ಷಣ ವರದಿಗಾರರು ಕುಂದಾಪುರ ಉಪ ವಲಯ ವಿಭಾಗದ ಲೋಕೋಪಯೋಗಿ ಅಧಿಕಾರಿಗಳಿಗೆ ಫೋನ್ ಕರೆ ಮೂಲಕ ಮಾಹಿತಿ ನೀಡಿದರು ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ನಿಲ್ಲಿಸಿ, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ಇನ್ನು ಈ ರೀತಿಯ ಕಾಮಗಾರಿ ನಡೆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ಮಾಡಿದರು 
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅಧಿಕಾರಿಗಳು ನಾವು ಈತನಕ ಹಲವು ಬಾರಿ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೇವೆ. ಆದರೆ ಗುತ್ತಿಗೆದಾರರು ನಮ್ಮ ಮಾತಿಗೆ ಕ್ಯಾರೆ ಎನ್ನದೆ ಅವರಿವರ ಹೆಸರು ಹೇಳಿ ನಮ್ಮನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಧ್ಯಮದ ಜೊತೆ ಅಸಹಾಯಕತೆ ತೋಡಿಕೊಂಡರು.
ಒಂದೆಡೆ ಮಳೆಗಾಲದ ಸಮಯ ರಸ್ತೆ ತುಂಬಾ ಹೋಂಡಾ ಗುಂಡಿ, ರಸ್ತೆಯಲ್ಲಿ ಬಿದ್ದಿರುವ ಹೋಂಡಾ ಗುಂಡಿ ಮುಚ್ಚುವಂತೆ ಸರಕಾರದಿಂದ ಅಧಿಕಾರಿಗಳಿಗೆ ಆದೇಶ ನೀಡಿದೆ, ಇದರ ಮಧ್ಯದಲ್ಲಿ ರಸ್ತೆಯ ಬದಿಯಲ್ಲಿ ಅವಜ್ಞಾನಿಕ ಪೈಪ್ ಲೈನ್ ಕಾಮಗಾರಿ ನಡೆಸಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಇನ್ನಷ್ಟು ಕಂಠಕ ಎದುರಾಗಿದೆ.

ಈ ತರಹದ ಕಾಮಗಾರಿ ನಡೆದಲ್ಲಿ ತಕ್ಷಣ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಕೋಸ್ಟಲ್ ನ್ಯೂಸ್ ಜೊತೆ ಹೇಳಿದ್ದಾರೆ.

ಶಾಸಕರು ಹಾಗೂ ಜನಪ್ರತಿನಿಧಿಗಳು ತಕ್ಷಣ ಇಂತಹ ಗುತ್ತಿಗೆದಾರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡ ಬೇಕೆನ್ನುವುದೇ ನಿಮ್ಮ ಕೋಸ್ಟಲ್ ನ್ಯೂಸ್ ಆಶಯ

ವರದಿ: ಸುರೇಶ್ ಅಮಾಸೆ ಬೈಲು   ಕೋಸ್ಟಲ್ ನ್ಯೂಸ್ ಕುಂದಾಪುರ

Ads on article

Advertise in articles 1

advertising articles 2

Advertise under the article