Kundapura ತ್ರಾಸಿ: ದೊಡ್ಡಮ್ಮ, ರಾಮ ಪೂಜಾರಿ 14 ನೇ ವರ್ಷದ ಪುಣ್ಯ ತಿಥಿ : ತಂದೆ ತಾಯಿಯನ್ನು ನೆನೆದ ಮಗ ಶಿವ ಆರ್ ಪೂಜಾರಿ
Monday, August 11, 2025
ಕುಂದಾಪುರ : 10 ಅಗಸ್ಟ್ ಆದಿತ್ಯವಾರ ದೊಡ್ಡಮ್ಮ, ರಾಮ ಪೂಜಾರಿ ಯವರ ಜಮೀನಿನಲ್ಲಿ ಶಿವ ಆರ್.ಪೂಜಾರಿ ಯವರು ಜನ್ಮ ನೀಡಿದ ತಂದೆ ತಾಯಿ ಯವರ ನೆನಪಿನ ಉಳಿವಿಗಾಗಿ ಸತತ ಕಳೆದ 14 ವರ್ಷಗಳಿಂದ ತಂದೆ ತಾಯಿಯ ನಮ್ಮನ್ನು ಅಗಲಿದ ದಿನದಂದು ನೆನಪಿಸಿಕೊಂಡು ಪುಣ್ಯ ತಿಥಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದುಕೊಂಡು ಬರುತ್ತಿದ್ದಾರೆ
ಆದಿತ್ಯವಾರ ದಂದು ಕುಟುಂಬ ಸಮೇತರಾಗಿ ಹಿರಿಯರಾದ ದೊಡ್ಡಮ್ಮ, ರಾಮ ಪೂಜಾರಿ ದಂಪತಿಗಳ ಪುಣ್ಯ ತಿಥಿ ಕಾರ್ಯಕ್ರಮ ನೆರವೇರಿಸಿದರು,
ಕಾರ್ಯಕ್ರಮದಲ್ಲಿ ಸ್ಥಳೀಯರು, ಹಿತೈಷಿಗಳು , ಅಕ್ಕ ಪಕ್ಕದ ಮನೆಯವರು ಕುಟುಂಬಸ್ಥರು ಉಪಸ್ಥಿತರಿದ್ದರು.