ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಕುಂದಾಪುರ: ಸಂಸದ  ಬಿ. .ವೈ ರಾಘವೇಂದ್ರ ರವರ ಹುಟ್ಟು ಹಬ್ಬದ ಪ್ರಯುಕ್ತ :   ಕಾರ್ಯಕರ್ತರಿಂದ ಬಸ್ ನಿಲ್ದಾಣ ಸ್ವಚ್ಛತೆ

ಕುಂದಾಪುರ: ಸಂಸದ ಬಿ. .ವೈ ರಾಘವೇಂದ್ರ ರವರ ಹುಟ್ಟು ಹಬ್ಬದ ಪ್ರಯುಕ್ತ : ಕಾರ್ಯಕರ್ತರಿಂದ ಬಸ್ ನಿಲ್ದಾಣ ಸ್ವಚ್ಛತೆ

ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ ವೈ ರಾಘವೇಂದ್ರ ಅವರ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ  ಬಿಜೆಪಿ ಕಾರ್ಯಕರ್ತರು ಮತ್ತು ಬಿ. ವೈ ರಾಘವೇಂದ್ರ ರವರ ಅಭಿಮಾನಿಗಳು ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ ಸರ್ಕಲ್ ನಲ್ಲಿರುವ ಬಸ್ ಸ್ಟ್ಯಾಂಡ್ ಸ್ವಚ್ಛತೆ ಮಾಡಿ ಕಾರ್ಯಕ್ರಮವನ್ನು ಬಿಜೆಪಿ ತಮ್ಮ ನಾಯಕನ ಹುಟ್ಟುಹಬ್ಬವನ್ನು ಸರಳವಾಗಿ ಹಾಗೂ ದೇಶಪ್ರೇಮದ ಭಕ್ತಿ ಯೊಂದಿಗೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿ ವೈ ರಾಘವೇಂದ್ರ ರವರ ಅಭಿಮಾನಿಗಳು ಸರಳವಾಗಿ ಹುಟ್ಟು ಹಬ್ಬದ ಕಾರ್ಯಕ್ರಮ ನೆರವೇರಿಸಿದರು ,

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಅಧ್ಯಕ್ಷೆ ಅನಿತಾ ಆರ್ ಕೆ ಮತ್ತು ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲ ವಸ್ರೆ ಬೈಂದೂರು ಮಂಡಲದ ನೂತನ ಕಾರ್ಯದರ್ಶಿ ಶಾಂತಿ ಗಂಗೊಳ್ಳಿ ಬೈಂದೂರು ಮಂಡಲ ಎಸ್ ಸಿ ಮೋರ್ಚಾ ಅಧ್ಯಕ್ಷ ಅಶೋಕ್ ಎಂ ಡಿ ಗಂಗೊಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಅಕ್ಷಯ್ ಮಂಕಿ
ಮಾಜಿ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಲಿ ಸದಸ್ಯ ಹರೀಶ್ ಮೇಸ್ತ ರಾಜು ಪೂಜಾರಿ ಗುಜ್ಜಾಡಿ, ಹಾಗೂ ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರು ಈ ವೇಳೆ ಹಾಜರಿದ್ದರು.

Ads on article

Advertise in articles 1

advertising articles 2

Advertise under the article