ಬೈಂದೂರು: ತ್ರಾಸಿ - ಮರವಂತೆ ಗಡಿ ಗುರುತು: ಜಟಾಪಟಿ!!
Wednesday, August 13, 2025
ಬೈಂದೂರು:
ಕುಂದಾಪುರ ಹಾಗೂ ಬೈಂದೂರು ತಾಲೂಕು ಗಡಿ ಗುರುತು , ಸಾರ್ವಜನಿಕರ ಮನವಿಯ ಮೇರೆಗೆ ಸ್ಪಂದಿಸಿ ಅದರಂತೆ ಕುಂದಾಪುರ ತಾಲೂಕು ತಹಶೀಲ್ದಾರ್ ಆದೇಶದಂತೆ ತ್ರಾಸಿ -ಮರವಂತೆ ಗಡಿ ಗುರುತು ಕಂದಾಯ ನಿರೀಕ್ಷಿತ ರಾಘವೇಂದ್ರ ದೇವಾಡಿಗ ರವರ ನೇತೃತ್ವದಲ್ಲಿ ಗಡಿ ಗುರುತು ಮಾಡಲಾಗಿದೆ,
ತ್ರಾಸಿ -ಮರವಂತೆ ಬೀಚಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬ್ರಿಜ್ 80 ರಷ್ಟು ಭಾಗದಲ್ಲಿ ತ್ರಾಸಿ ಗ್ರಾಮದ ಗಡಿ ಗುರುತು ಮಾಡಲಾಗಿದೆ, ಇದಕ್ಕೆ ಮರವಂತೆ ಗ್ರಾಮದ ಪಂಚಾಯತ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಇದು ಅವಜ್ಞಾನಿಕ ಗಡಿ ಗುರುತು ನಮ್ಮ ಸಹಮತ ಇಲ್ಲ, ಮತ್ತು ಗಡಿ ಗುರುತು ಮಾಡುವಾಗ ಬೈಂದೂರು ತಾಲೂಕಿನ ಅಧಿಕಾರಿಗಳು ಯಾರೊಬ್ಬರು ಇಲ್ಲದೆ ಮಾಡಿರುವುದು ಸರಿಯಲ್ಲ ಇದು ಅವೈಜ್ಞಾನಿಕ ಗಡಿ ಗುರುತು ಎಂದು ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಖಾರ್ವಿ ಮತ್ತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ತ್ರಾಸಿ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಹಲವು ವರ್ಷಗಳಿಂದ ತ್ರಾಸಿ ಗ್ರಾಮ ಪಂಚಾಯತ್ ಗಡಿ ಗುರುತಿನ ವಿಚಾರದಲ್ಲಿ ಬಹಳಷ್ಟು ಗ್ರಾಮಸ್ಥರ ಬೇಡಿಕೆ ಹಿನ್ನೆಲೆಯಲ್ಲಿ ತ್ರಾಸಿ ಗ್ರಾಮ ಪಂಚಾಯತ್ ಗಡಿ ಗುರುತು ಕುಂದಾಪುರ ತಾಲೂಕು ಅಧಿಕಾರಿಗಳು ಮಾಡಿದ್ದಾರೆ, ಎಂದು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ಹೇಳಿದರು
ಒಟ್ಟಾರೆಯಾಗಿ ಎರಡು ಗ್ರಾಮ ಪಂಚಾಯತ್ ಅಧ್ಯಕ್ಷ ಸದಸ್ಯರ ಗಡಿ ಗುರುತಿನ ಜಟಾಪಟಿ ಜೋರಾಗಿದೆ ಎನ್ನಲಾಗಿದೆ,
ಈ ಸಂದರ್ಭ ತ್ರಾಸಿ ಮತ್ತು ಮರವಂತೆ ಗ್ರಾಮ ಪಂಚಾಯತ್ ಗ್ರಾಮ ಆಡಳಿತ ಅಧಿಕಾರಿಗಳು ಎರಡು ಗ್ರಾಮದ ಪಂಚಾಯತ್ ಅಧ್ಯಕ್ಷರು ಸದ್ಯಸರು ಹಾಗೂ ಪಿಡಿಓ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.