ಕುಂದಾಪುರ: ಬೀದಿ ಶ್ವಾನಗಳ ಅಟ್ಟಹಾಸ!! ಜನರು ಆತಂಕದ ಸ್ಥಿತಿ ಯಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ !!
Monday, August 25, 2025
ಕುಂದಾಪುರ: ಪುರಸಭೆ ವ್ಯಾಪ್ತಿಯ ಕುಂದಾಪುರ ಸರಕಾರಿ ಆಸ್ಪತ್ರೆಯ ಕಾಂಪೌಂಡ್ ಬಳಿ ಕಳೆದ ಹಲವು ದಿನಗಳಿಂದ ಬೀದಿ ನಾಯಿ ಮರಿ ಹಾಕಿದ ಮೇಲೆ ಅತಿ ಹೆಚ್ಚು ಮಹಿಳೆಯರಿಗೆ ಕಚ್ಚಿದೆ ಎಂಬುದು ಆಸ್ಪತ್ರೆಯ ಎದುರುಗಡೆ ಇರುವ ಚಾಲಕರು ಮಾಹಿತಿ ತಿಳಿಸಿದ್ದಾರೆ
ಸೋಮವಾರ ಬೆಳಿಗ್ಗೆ ವೇಳೆ ರಿಕ್ಷಾ ಚಾಲಕ ಯೋರ್ವರು ಬಾಡಿಗೆಗೆ ಎಂದು ಬಂದು ರಸ್ತೆ ಬಳಿ ನಿಂತಾಗ ಓಡಿ ಬಂದು ನಾಯಿ ಕಚ್ಚಿದೆ ಎನ್ನಲಾಗುತ್ತಿದೆ, ಇಲಿಯ ತನಕ ಸರಿ ಸುಮಾರು 30 ಜನರಿಗೂ ಮಿಕ್ಕಿ ಕಚ್ಚಿದೆ ಎನ್ನಲಾಗುತ್ತಿದೆ, ಇದರ ಬಗ್ಗೆ ಸ್ಥಳೀಯರು ಹಾಗೂ ಸಾರ್ವಜನಿಕರು ಕುಂದಾಪುರ ಪುರಸಭೆಗೆ ಮಾಹಿತಿ ನೀಡಿದರು ಏನು ಪ್ರಯೋಜನವಾಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಸಮಧಾನ ಹೊರ ಹಾಕಿದರು.
ತಕ್ಷಣ ಈ ಬೀದಿನಾಯಿಯನ್ನು ಸಂರಕ್ಷಣೆ ಮಾಡಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಾರ್ವಜನಿಕರಿಗೆ ನಿರ್ಭೀತಿಯಿಂದ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂಬುದೇ ನಿಮ್ಮ ಕೋಸ್ಟಲ್ ನ್ಯೂಸ್ ಆಶಯ!!
ವರದಿ: ಗೋಪಾಲ್ ಕವ್ರಾಡಿ ಕೋಸ್ಟಲ್ ನ್ಯೂಸ್ ಕುಂದಾಪುರ