ಸ್ನೇಹ ಸಂಘ ಹೊಸಪೇಟೆ - ತ್ರಾಸಿ 30 ನೇ ವರ್ಷದ ಸಂಭ್ರಮದ ಗಣೇಶೋತ್ಸವ
Thursday, August 28, 2025
ಅದರಂತೆ ಈ ವರ್ಷ 30ನೇ ವರ್ಷದ ಗಣೇಶೋತ್ಸವ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗುತ್ತಿದೆ,
27 ರಿಂದ 29 ರ ತನಕ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಸಾರ್ವಜನಿಕ ಅನ್ನ ಸಂತರ್ಪಣೆ , ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು ಈ ಎಲ್ಲಾ ಶ್ರೀ ದೇವರ ಕಾರ್ಯಕ್ರಮಕ್ಕೆ ಊರ ಪರ ಊರ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆದು ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀದೇವರ ಕಾರ್ಯಕ್ರಮ ಸಡಗರ ಸಂಭ್ರಮದಿಂದ ವಿಜ್ರಂಬಣೆಯಿಂದ ನಾಳೆಯ ದಿನ 29- 08- 2025 ರಂದು ಸಂಪನ್ನಗೊಳ್ಳಲಿದೆ
29 ರ ಸಂಜೆ 4 ಗಂಟೆಗೆ ಶ್ರೀ ಗಣಪತಿ ದೇವರ ಮೂರ್ತಿಯನ್ನು ಪುರ ಮೆರವಣಿಗೆಯ ಮೂಲಕ ಭಕ್ತಿ ಭಾವ ಸಂಗೀತದಿಂದ ಜೈಕಾರ ಕೂಗಿ ಜಲ ಸ್ತಂಭನ ಮಾಡಲಾಗುತ್ತದೆ ಎಂದು ಸ್ನೇಹ ಸಂಘದ ಆಡಳಿತ ಮಂಡಳಿ ಮಾಧ್ಯಮಕ್ಕೆ ಹೇಳಿದ್ದಾರೆ