ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಧರ್ಮಸ್ಥಳ: ಶವ ಹೂತಿಟ್ಟ ಅನಾಮಧೇಯ ವ್ಯಕ್ತಿಯ ಮೂಲಕ ಸ್ಥಳ ಮಹಜರು ಮಾಡಿದ ಎಸ್ ಐಟಿ ತಂಡ

ಧರ್ಮಸ್ಥಳ: ಶವ ಹೂತಿಟ್ಟ ಅನಾಮಧೇಯ ವ್ಯಕ್ತಿಯ ಮೂಲಕ ಸ್ಥಳ ಮಹಜರು ಮಾಡಿದ ಎಸ್ ಐಟಿ ತಂಡ

COSTALNEWS ದಾಮೋದರ ಮೊಗವೀರ ಸಾರಥ್ಯದಲ್ಲಿ 


ಬೆಳ್ತಂಗಡಿ: ಧರ್ಮಸ್ಥಳ ಆಸುಪಾಸಿನಲ್ಲಿ ಶವ ಹೂತ ಅನಾಮಧೇಯ ವ್ಯಕ್ತಿಯ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನ್ನು ಕರೆತಂದು ಸ್ಥಳ ಮಹಜರು ನಡೆಸಿದ ಎಸ್ ಐ ಟಿ ಪೊಲೀಸರು, ಸೋಮವಾರ ಸಂಜೆಯ ವೇಳೆಗೆ ಸ್ಥಳ ಗುರತಿಸುವಿಕೆ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ.
ಮಹಜರು ಪ್ರಕ್ರಿಯೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಸಾಕ್ಷಿ ದೂರುದಾರನ್ನು ಮಹಜರಿಗೆ ಕರೆದೊಯ್ದ ಎಸ್ ಐ ಟಿ ಪೊಲೀಸರು, 13 ಸ್ಥಳಗಳನ್ನು ಸಾಕ್ಷಿಯ ಸಹಾಯದಿಂದ ಗುರುತಿಸಿದೆ ಎಂದು ತಿಳಿದು ಬಂದಿದೆ.

ಕೆಲವು ದಿನಗಳ ಹಿಂದೆ ಅನಾಮಧೇಯ ವ್ಯಕ್ತಿಯೊಬ್ಬ ತಾನು ಧರ್ಮಸ್ಥಳ ಆಸುಪಾಸಿನಲ್ಲಿ ಹಲವು ಶವಗಳನ್ನು ವೀಲೇವಾರಿ ಮಾಡಿದ್ದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದನು. ನಂತರದ ದಿನಗಳಲ್ಲಿ ಈ ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆ ನಡೆಯಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದವು. ರಾಜ್ಯ ಸರ್ಕಾರ ಒತ್ತಾಯಗಳಿಗೆ ಮಣಿದು ಕೊನೆಗೂ ಎಸ್ಐಟಿ ತಂಡ ರಚನೆ ಮಾಡಿತ್ತು. ಇದೀಗ ಎಸ್ಐಟಿ ತಂಡ ತನ್ನ ಕೆಲಸವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದು ಇಂದು ಮಹಾಜರು ಪ್ರಕ್ರಿಯೆ ನಡೆಸಿತು. ಈ ಪ್ರಕ್ರಿಯೆ ನಾಳೆಯೂ ಮುಂದುವರಿಯಲಿದ್ದು ಸ್ಥಳ ಗುರುತು ಆದ ಬಳಿಕ ಉತ್ಖನನ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ

SIT ತಂಡದಿಂದ ಮಹಜರು ಪ್ರಕ್ರಿಯೆ ಇಂದಿಗೆ ಸ್ಥಗಿತ: ಮತ್ತೆ ನಾಳೆ ಮಂಗಳವಾರ ನಡೆಯಲಿದೆ 

Ads on article

Advertise in articles 1

advertising articles 2

Advertise under the article