ಬೈಂದೂರು: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮರವಂತೆ, ನಾಗರ ಪಂಚಮಿಯ ದಿನದಂದು ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ
Tuesday, July 29, 2025
ಬೈಂದೂರು; ತಾಲೂಕಿನ ಮರವಂತೆ ಶ್ರೀ ಸುಬ್ರಹ್ಮಣ್ಯ, ಶ್ರೀ ವಿದ್ಯಾ ಗಣಪತಿ, ಶ್ರೀ ನವಗ್ರಹ ದೇವಸ್ಥಾನದಲ್ಲಿ ನಾಗರಪಂಚಮಿ ಕಾರ್ಯಕ್ರಮ ಭಕ್ತಿ ಶ್ರದ್ಧಾ ಭಾವದಿಂದ ಸಡಗರ ಸಂಭ್ರಮದಿಂದ ಜರುಗಿತು
ನಾಗರಪಂಚಮಿ ದಿನದಂದು ಶ್ರೀ ನಾಗದೇವರಿಗೆ ವಿಶೇಷ ಪೂಜೆ, ಬೋಂಡ ನೈವಿದ್ಯ, ಮಂಗಳಾರತಿ, ಹಣ್ಣು ಕಾಯಿ, ಹಾಗೂ ಆಗಮಿಸಿದಂತ ಭಕ್ತಾದಿಗಳಿಗೆ ಶ್ರೀ ದೇವರ ಅನ್ನಸಂತರ್ಪಣೆ ಪ್ರಸಾದ ವಿತರಣೆ ಮಾಡಲಾಯಿತು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ತಿಮ್ಮಪ್ಪ ದೇವಾಡಿಗ ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡಿರುವುದು ಹೀಗೆ,
ಕಳೆದ 10 ವರ್ಷಗಳಿಂದ ನಾಗರ ಪಂಚಮಿಯ ಶುಭದಿನದಂದು ಸಾಮಾಜಿಕ ಸಾಂಸ್ಕೃತಿಕ , ಧಾರ್ಮಿಕ, ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ದೇವಸ್ಥಾನದ ವತಿಯಿಂದ ಶ್ರೀ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ಮಾಡುತ್ತಾ ಬಂದಿದ್ದೇವೆ ಈ ದಿನ ನಾಗರ ಪಂಚಮಿ ದಿನದಂದು ಉದ್ಯಮಿ, ಸಮಾಜ ಸೇವಕ, ಶೈಕ್ಷಣಿಕ ಕ್ಷೇತ್ರದ ಧೀಮಂತ ನಾಯಕ ಹೆಚ್ ಜಯಶೀಲ ಶೆಟ್ಟಿ ಯವರನ್ನು ಗೌರವದಿಂದ ಗುರುತಿಸಿ ಅವರಿಗೆ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಮಾಡಲಾಯಿತು
ಸಮರಂಭದ ಕಾರ್ಯಕ್ರಮಕ್ಕೆ ಭಕ್ತಾ ಅಭಿಮಾನಿಗಳು ಸಾಕಷ್ಟು ಹೆಚ್ಚಿನ ರೀತಿಯಲ್ಲಿ ಭಕ್ತರು ಆಗಮಿಸಿ ಶ್ರೀ ನಾಗ ದೇವರ ಮುಡಿಗಂಡ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ ನಾಗರ ಪಂಚಮಿ ಹಬ್ಬ ವಿಜೃಂಭಣೆಯಿಂದ ಸಂಪನ್ನಗೊಂಡಿತು
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗೋಪಾಲ್ ಪೂಜಾರಿ, ಲೋಕೇಶ್ ಅಡಿಗ ಬಡಕೆರೆ, ಪವನ್ ಕಿರಣ ಕೆರೆ, ಉದಯಕುಮಾರ್ ಹಟ್ಟಿಯಂಗಡಿ, ಶಂಕರ್ ಹಂಕದಕಟ್ಟೆ, ರಾಜು ಪೂಜಾರಿ ಬಡಕೆರೆ, ಬಸವರಾಜ್ ಶೆಟ್ಟಿಗಾರ ಕೋಟೇಶ್ವರ, ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು