ಬೈಂದೂರು: ಮರವಂತೆ ಜಾತ್ರೆಗೆ ಬಂದಂತ ವ್ಯಾಪಾರಸ್ಥರಿಂದ: ಪ್ರವಾಸೋದ್ಯಮ ಇಲಾಖೆ ವಿರುದ್ಧ ಆಕ್ರೋಶ!!
Sunday, July 27, 2025
ಬೈಂದೂರು: ತಾಲೂಕಿನ ಮರವಂತೆ ವರಹ ಶ್ರೀ ಮಹಾರಾಜ ಸ್ವಾಮಿ ದೇವಸ್ಥಾನಕ್ಕೆ ಹೊಟ್ಟೆಪಾಡಿಗಾಗಿ ವರ್ಷಂ ಪತಿ ಬರುವಂತ ವ್ಯಾಪಾರಿಗಳು ಈ ವರ್ಷ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಪಡೆದಿರುವ ವ್ಯಕ್ತಿಗಳಿಂದ ವ್ಯಾಪಾರಸ್ಥರಿಗೆ ಅನ್ಯಾಯವಾಗಿದೆ ಎಂದು ವ್ಯಾಪಾರಸ್ಥರು ಪ್ರವಾಸೋದ್ಯಮ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದರು.
ಪ್ರತಿವರ್ಷ ಜಾತ್ರೆಗೆ ಆಗಮಿಸುವ ವ್ಯಾಪಾರಸ್ಥರು ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಯವರಿಗೆ ಜಾತ್ರೆಯಲ್ಲಿ ವ್ಯಾಪಾರ ಮಾಡಿ ಒಂದಷ್ಟು ದೇವಸ್ಥಾನದ ಅಭಿವೃದ್ಧಿಗಾಗಿ ಹಣ ನೀಡುತ್ತಿದ್ದಾರೆ ಎನ್ನಲಾಗುತ್ತಿತ್ತು, ಆದರೆ ಈ ವರ್ಷ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಾರ್ಕಿಂಗ್ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ದೇವಸ್ಥಾನದ ಬಳಿಯಲ್ಲಿರುವ ಜಾಗವನ್ನು ಟೆಂಡರ್ ಪಡೆದಿದ್ದು ಎನ್ನಲಾಗುತ್ತಿದೆ ಆದರೆ ಗುತ್ತಿಗೆದಾರರು ಬಡ ವ್ಯಾಪಾರಿಗಳಿಗೆ 10 ಪೀಟ್ ಜಾಗಕ್ಕೆ 5,500 ಪಡೆದು ವ್ಯಾಪಾರಸ್ಥರಿಗೆ ಅನ್ಯಾಯ ಮಾಡಿದ್ದಾರೆ ಎಂದು ಇದಕ್ಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ,
ನಿನ್ನೆಯ ದಿನ ವಿಪರೀತ ಮಳೆ ಹಿನ್ನೆಲೆಯಲ್ಲಿ ಜಾತ್ರೆಗೆ ಸಾಕಷ್ಟು ಭಕ್ತರು ಇಳಿಮುಖ ವಾಗಿದ್ದು ಬಡ ವ್ಯಾಪಾರಸ್ಥರ ಗೋಳು ಕೇಳುವರೇ ಇಲ್ಲಂತದ್ದಾಗಿದೆ ಎಂದು ಹೇಳುತ್ತಿದ್ದಾರೆ!!
ನಿನ್ನೆ ರಾತ್ರಿ ಎಂಟು ಗಂಟೆಯ ವೇಳೆ ಓರ್ವ ವ್ಯಾಪಾರಸ್ಥನಿಗೆ ಟೆಂಡರ್ ಗುತ್ತಿಗೆ ಪಡೆದಿರುವ ವ್ಯಕ್ತಿಗಳಿಂದ ವ್ಯಾಪಾರಸ್ಥರ ಮೇಲೆ ಹಲ್ಲೆ ಯತ್ನಕ್ಕೆ ಮುಂದಾಗಿದ್ದಾರೆ ಅದೇ ವೇಳೆ ಗಂಗೊಳ್ಳಿ ಪೊಲೀಸರು ಆಗಮಿಸಿ ಆಗುತ್ತಿರುವ ದೊಡ್ಡ ಅವಘಡ ತಪ್ಪಿಸಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಗುಸು ಗುಸು ಸುದ್ದಿ
ತಕ್ಷಣ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಘಟನೆಯ ಬಗ್ಗೆ ಮಾಹಿತಿ ತಿಳಿದು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಹಾಗೂ ಮುಂದಿನ ವರ್ಷ ಈ ಜಾಗವನ್ನು ಒಂದು ದಿನ ದೇವಸ್ಥಾನಕ್ಕೆ ಬಿಟ್ಟುಕೊಟ್ಟು ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಯವರಿಗೆ ಜಾತ್ರೆ ನಡೆಸಲು ಅನುವು ಮಾಡಿಕೊಡಬೇಕೆಂದು ಭಕ್ತರು ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದೆ
ತಕ್ಷಣ ಜಿಲ್ಲಾ ಆಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಇತ್ತಕಡೆ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.