COSTALNEWS/ ಗುಜ್ಜಾಡಿ ಕೊಟೆಕೇರಿ ನಾಗಬನದಲ್ಲಿ ವೈಭವದ ನಾಗರಪಂಚಮಿ ಸಂಭ್ರಮ
Tuesday, August 18, 2026
ಗುಜ್ಜಾಡಿ: ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಜ್ಜಾಡಿ ಗ್ರಾಮದ ಕೊಟೆಕೇರಿ ನಾಗಬನದಲ್ಲಿ ನಾಗರಪಂಚಮಿ ಹಬ್ಬವನ್ನು ಅತ್ಯಂತ ವೈಭವ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ಲೈಟ್‌ಹೌಸ್ ಕೋಟಿಗುಡ್ಡೆ ಸಮೀಪದ ಬೆಣ್ಣಿಗೇರಿ ಪ್ರದೇಶದಲ್ಲಿರುವ ನಾಗಬನದಲ್ಲಿ ಬೆಳಗ್ಗಿನಿಂದಲೇ ಭಕ್ತರ ಸಂಭ್ರಮ ಮನೆಮಾಡಿತ್ತು. ನಾಗದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದ್ದು, ನೂರಾರು ಭಕ್ತರು ನಾಗದೇವರ ದರ್ಶನ ಪಡೆದು ಪುನೀತರಾದರು.
ನಾಗರಪಂಚಮಿ ಹಿನ್ನೆಲೆಯಲ್ಲಿ ನಾಗಬನದ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ನಾಗದೇವರ ಕೃಪೆಗೆ ಪಾತ್ರರಾಗಲು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಮಹಾಸತಿ ಸಂಸ್ಥೆಯ ಶ್ರೀ ಶೇಷಯ್ಯ ಕೊತ್ವಾಲ್, ಶ್ರೀಮತಿ ಸವಿತಾ, ಪದ್ಮನಾಭ ಕೊತ್ವಾಲ್, ವಸಂತಿ ವರ್ಷಿಣಿ ಇಂಡಸ್ಟ್ರಿಯ ಬಳ್ಳಾರಿ, ಬಟುವಾಡಿ ರಾಮಚಂದ್ರ ಸೇರುಗಾರ್, ಅಶೋಕ್ ಕುಂದಾಪುರ, ಸಂದೀಪ್ ಸೇರುಗಾರ್ ಕುಂದಾಪುರ, ಬಟುವಾಡಿ ಅಶೋಕ್ ಸೇರುಗಾರ್, ಪೊಲೀಸ್ ಉಡುಪಿ, ಬಟುವಾಡಿ ನಾಗರಾಜ್ ಕುಂದಾಪುರ, ಬಟುವಾಡಿ ನಾಗೇಂದ್ರ, ರಾಘವೇಂದ್ರ ಬಟುವಾಡಿ, ವಸಂತ್ ಬಟುವಾಡಿ ಸೇರಿದಂತೆ ನಂಬಿದ ಕುಟುಂಬಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.