COASTALNEWS ಬಿಗ್ ಇಂಪ್ಯಾಕ್ಟ್: ಕೊನೆಗೂ ಎಚ್ಚೆತ್ತುಕೊಂಡ ಕುಂದಾಪುರ ಪುರಸಭೆ; ಎಲ್.ಐ.ಸಿ. ರೋಡ್ ನಿವಾಸಿಗಳಿಗೆ ಬೆಳಕಿನ ಭಾಗ್ಯ!ಕತ್ತಲೆಯ ಸಮಸ್ಯೆಗೆ ಸಿಕ್ತು ಮುಕ್ತಿ.
Wednesday, August 19, 2026
COASTALNEWS' ವರದಿಗೆ ಕೊನೆಗೂ ಬಿಗ್ ಇಂಪ್ಯಾಕ್ಟ್ ಸಿಕ್ಕಿದೆ! ಕುಂದಾಪುರ ಪುರಸಭೆ ವ್ಯಾಪ್ತಿಯ ಎಲ್.ಐ.ಸಿ. ರೋಡ್ ಬಳಿಯ ನಿವಾಸಿಗಳ ಹಲವು ತಿಂಗಳ ಕತ್ತಲೆಯ ಸಮಸ್ಯೆಗೆ ಈಗ ಮುಕ್ತಿ ಸಿಕ್ಕಿದ್ದು, ದಾರಿ ದೀಪಗಳು ಕಣ್ಣನ್ನು ಸೆಳೆಯುವಂತೆ ಬೆಳಗಿವೆ!
ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ಭಾಗದ ಎಲ್.ಐ.ಸಿ. ರೋಡ್ ಸಮೀಪದ ವ್ಯಾಸರಾಜ ಕಲ್ಯಾಣ ಮಂಟಪದ ಎದುರುಗಡೆ ಹಾಗೂ ಶಕುಂತಲಾ ಶೆಟ್ಟಿ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಕಳೆದ ಹಲವು ತಿಂಗಳಿಂದ ಬೀದಿ ದೀಪಗಳು ಉರಿಯುತ್ತಿರಲಿಲ್ಲ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ಸಂಚರಿಸಲು ಸ್ಥಳೀಯ ನಿವಾಸಿಗಳು ಮತ್ತು ಹಾದಿಹೋಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು.
ವರದಿಯ ಹಿಂದಿನ ದೃಶ್ಯಾವಳಿಈ ಕುರಿತು ಸ್ಥಳೀಯ ನಿವಾಸಿ ಸಂತೋಷ್ ಮೊಗವೀರ ಅವರು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಿ ಪ್ರಶ್ನೆ ಮಾಡಿದ್ದರು. ಸಾರ್ವಜನಿಕರ ಈ ಪ್ರಮುಖ ಸಮಸ್ಯೆಯನ್ನು ಗಮನಿಸಿದ 'COASTALNEWS' ತಂಡ, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸವಿಸ್ತಾರವಾದ ವರದಿಯನ್ನು ಬಿತ್ತರಿಸಿತ್ತು.
COASTALNEWS ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕುಂದಾಪುರ ಪುರಸಭೆ ಅಧಿಕಾರಿಗಳು, ತಕ್ಷಣವೇ ಸ್ಥಳಕ್ಕೆ ಧಾವಿಸಿ ವಿದ್ಯುತ್ ಕಂಬಗಳಿಗೆ ನೂತನ ದಾರಿ ದೀಪಗಳನ್ನು ಅಳವಡಿಸಿ, ಕತ್ತಲಿದ್ದ ರಸ್ತೆಗೆ ಬೆಳಕಿನ ಭಾಗ್ಯ ಕಲ್ಪಿಸಿದ್ದಾರೆ. 'COASTALNEWS' ನಡೆಸಿದ ನಿರಂತರ ಜನಾಂದೋಲನದ ಫಲವಾಗಿ ಇಂದು ಎಲ್.ಐ.ಸಿ. ರೋಡ್ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಬೆಳಗುತ್ತಿವೆ.
ಸ್ಥಳೀಯ ನಿವಾಸಿಗಳು COASTALNEWS ತಂಡಕ್ಕೆ ಮತ್ತು ತಕ್ಷಣವೇ ಕ್ರಮ ಕೈಗೊಂಡು ದಾರಿದೀಪ ಅಳವಡಿಸಿದ ಪುರಸಭೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು