COSTALNEWS/ ಅರಬ್ಬಿ ಸಮುದ್ರದಲ್ಲಿ ದೋಣಿ ಆಯತಪ್ಪಿ ಬಿದ್ದು ಮೀನುಗಾರ ಸಾವು: ಮರವಂತೆ ಬಂದರಿನ ಬಳಿ ದುರಂತ
Wednesday, August 19, 2026
ಗಂಗೊಳ್ಳಿ: ಮೀನುಗಾರಿಕೆಗೆ ತೆರಳಿದ್ದ ವೇಳೆ ಜೋರಾದ ಗಾಳಿಗೆ ದೋಣಿ ತೇಲಾಡಿ, ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮರವಂತೆ ಬಂದರಿನ ಸಮೀಪ ನಡೆದಿದೆ. ಮರವಂತೆ ಗ್ರಾಮದ ನಾಗರಾಜ ಖಾರ್ವಿ ಮೃತಪಟ್ಟ ದುರ್ದೈವಿ. ಇವರು ಎಂದಿನಂತೆ ಬೆಳಿಗ್ಗೆ 4:30ಕ್ಕೆ ಮನೆಯಿಂದ ಹೊರಟು ಮರವಂತೆ ಬಂದರು ತಲುಪಿದ್ದರು. ಬೆಳಿಗ್ಗೆ 5:00 ಗಂಟೆಗೆ ಆನಂದ ಖಾರ್ವಿ ಅವರಿಗೆ ಸೇರಿದ ದೋಣಿಯಲ್ಲಿ ಇತರ ಕೆಲಸಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದರು.
ಮರವಂತೆ ಗ್ರಾಮದ ನಾಗರಾಜ ಖಾರ್ವಿ ಮೃತಪಟ್ಟ ದುರ್ದೈವಿ. ಇವರು ಎಂದಿನಂತೆ ಬೆಳಿಗ್ಗೆ 4:30ಕ್ಕೆ ಮನೆಯಿಂದ ಹೊರಟು ಮರವಂತೆ ಬಂದರು ತಲುಪಿದ್ದರು. ಬೆಳಿಗ್ಗೆ 5:00 ಗಂಟೆಗೆ ಆನಂದ ಖಾರ್ವಿ ಅವರಿಗೆ ಸೇರಿದ ದೋಣಿಯಲ್ಲಿ ಇತರ ಕೆಲಸಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದರು. ಬಂದರಿನಿಂದ ಸುಮಾರು 200 ಮೀಟರ್ ದೂರದ ಅರಬ್ಬಿ ಸಮುದ್ರದಲ್ಲಿ ದೋಣಿ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿದೆ. ಈ ವೇಳೆ ದೋಣಿ ನೀರಿನಲ್ಲಿ ನಿಯಂತ್ರಣ ತಪ್ಪಿ ತೇಲಾಡಿದ ಪರಿಣಾಮ, ದೋಣಿಯಲ್ಲಿದ್ದ ನಾಗರಾಜ ಖಾರ್ವಿ ಅವರು ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ.
ತಕ್ಷಣವೇ ದೋಣಿಯಲ್ಲಿದ್ದ ಸಹ-ಕೆಲಸಗಾರರು ಹಾಗೂ ಅವರ ಅಣ್ಣ ಶ್ರೀನಿವಾಸ ಖಾರ್ವಿ ಸೇರಿ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಉಪಚರಿಸಿದ್ದಾರೆ. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ, ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಪರೀಕ್ಷಿಸಿದ ವೈದ್ಯರು ಬೆಳಿಗ್ಗೆ 07:15 ರ ಸುಮಾರಿಗೆ ನಾಗರಾಜ ಖಾರ್ವಿ ಅವರು ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮೃತರ ಸಹೋದರ ನೀಡಿದ ದೂರಿನನ್ವಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 15/2026, ಕಲಂ: 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.