ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

udupi ಬೈಂದೂರು: ಕೊಲ್ಲೂರು ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ದುಸ್ಥಿತಿಯ ಕುರಿತು COSTALNEWS ಪ್ರಸಾರ ಮಾಡಿದ್ದ ವರದಿಗೆ ತ್ವರಿತ ಸ್ಪಂದನೆ ವ್ಯಕ್ತವಾಗಿದೆ.

udupi ಬೈಂದೂರು: ಕೊಲ್ಲೂರು ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ದುಸ್ಥಿತಿಯ ಕುರಿತು COSTALNEWS ಪ್ರಸಾರ ಮಾಡಿದ್ದ ವರದಿಗೆ ತ್ವರಿತ ಸ್ಪಂದನೆ ವ್ಯಕ್ತವಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಇತಿಹಾಸ ಪ್ರಸಿದ್ಧ ಕಾರ್ಣಿಕ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಪ್ರತಿನಿತ್ಯ ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸುವ ಸ್ಥಳದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಶೌಚಾಲಯದ ಕುರಿತು ನಿಮ್ಮ COSTALNEWS ಶುಕ್ರವಾರ ವರದಿ ವಿತರಿಸಿದ ಬೆನ್ನಲ್ಲೇ 24 ಗಂಟೆಯ ಒಳಗಡೆ   ಕೊಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸ್ಥಳಕ್ಕೆ ಭೇಟಿ ನೀಡಿ ಶೌಚಾಲಯದ ಸ್ಥಿತಿಯನ್ನು ಪರಿಶೀಲಿಸಿದರು.
ನಿನ್ನೆ ಶುಕ್ರವಾರ ವರದಿ ಬಿತ್ತರಿಸಿದ ಹಿನ್ನೆಲೆಯಲ್ಲಿ 
 ಪರಿಶೀಲನೆ ವೇಳೆ ಕಂಡುಬಂದ ಅವ್ಯವಸ್ಥೆಗಳ ಬಗ್ಗೆ ಗುತ್ತಿಗೆದಾರನಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಖಡಕ್ ಸೂಚನೆ ನೀಡಿದರು

ಶೌಚಾಲಯದಲ್ಲಿ ನೀರು, ಸ್ವಚ್ಛತೆ, ಬೆಳಕು ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಶೀಘ್ರದಲ್ಲೇ ಕಲ್ಪಿಸಲು ಅಧಿಕಾರಿಗಳು ಸೂಚಿಸಿದ್ದು, ಸಾರ್ವಜನಿಕರಿಂದ ದೂರುಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಸಮಸ್ಯೆಯನ್ನು ಬೆಳಕಿಗೆ ತಂದ COSTALNEWS ವರದಿ ಹಾಗೂ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡ ಕೊಲ್ಲೂರು ಪಿಡಿಓ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
COSTALNEWS IMPACT – ಜನರ ಸಮಸ್ಯೆಗೆ ಸ್ಪಂದಿಸಿದ ಆಡಳಿತ..!

Ads on article

Advertise in articles 1

advertising articles 2

Advertise under the article