UAE ಕತಾರಿನ ರಾಜ ಎಮೀರ್ ತಮೀಮ್ ಬಿನ್ ಖಲೀಫಾ ಅಲ್ ಥಾನಿ ಅವರ ತಂದೆ ಎಮಿರ್ ಅಹ್ಮದ್ ಬಿನ್ ಅಲ್ಕ ಥಾನಿ ನಿಧನ!! ಕೇಂದ್ರ ಸಚಿವರಾದ ಕಿರಣ್ ರಿಜೂಜು ಅವರು ಕತಾರಿಗೆ ಆಗಮನ ನೀಡಿ ಸಾಂತ್ವಾನ.
Saturday, July 18, 2026
UAE ಕತಾರಿನ ಈಗಿನ ರಾಜ ಎಮೀರ್ ಶ್ರೀ ತಮೀಮ್ ಬಿನ್ ಖಲೀಫಾ ಅಲ್ ಥಾನಿ ಅವರ ತಂದೆ ಎಮಿರ್ ಶ್ರೀ ಅಹ್ಮದ್ ಬಿನ್ ಅಲ್ಕ ಥಾನಿ ಅವರು 12ನೇ ತಾರೀಖು ಪಂಚಭೂತಗಳಲ್ಲಿ ಲೀನರಾದರು.
ಕತಾರ್ ದೇಶವನ್ನು ಪ್ರಪಂಚದ ಭೂಪಟದಲ್ಲಿ ಶಿಖರದೆತ್ತರಕ್ಕೆ ಏರಲು ಪ್ರೇರೇಪಿಸಿದ ಕರ್ತೃ ಇವರು. ಭಾರತ ದೇಶದೊಂದಿಗೆ ಇವರ ಸ್ನೇಹ, ಬಾಂಧವ್ಯ, ಒಲವು ಹಾಗೂ ಅಕ್ಕರೆ ಅಪಾರ. ಇವರ ನಿಧನ ಕತಾರ್ ದೇಶಕ್ಕೆ ಮಾತ್ರವಲ್ಲದೆ ಭಾರತ ದೇಶದಲ್ಲೂ ಶೋಕವನ್ನುಂಟು ಮಾಡಿದೆ. ಒಂದು ದಿನಕ್ಕೆ ರಾಷ್ಟ್ರಮಟ್ಟದ ಶೋಕಾಚರಣೆಯನ್ನು ಇವರ ಆತ್ಮಕ್ಕೆ ಶಾಂತಿ ಕೋರಲು ಮೀಸಲಿಡಲಾಗಿತ್ತು. ಭಾರತೀಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಗೌರವಾನ್ವಿತ ಶ್ರೀ ಕಿರಣ್ ರಿಜೂಜು ಅವರು ಕತಾರಿಗೆ ಆಗಮಿಸಿ ಕತಾರಿನ ಎಮಿರ್ ಶ್ರೀ ತಮೀಮ್ ಬಿನ್ ಖಲೀಫಾ ಅಲ್ ಥಾನಿ ಅವರನ್ನು ಭೇಟಿ ನೀಡಿ ಅವರ ತಂದೆ ಹಾಗೂ ಕತ್ತರಿನ ಪಿತಾಮಹ ಎಂದೇ ಪರಿಗಣಿಸಲಾಗುವ ತಂದೆ ಎಮಿರ್ ಶ್ರೀ ಅಹ್ಮದ್ ಬಿನ್ ಅಲ್ಕ ಥಾನಿ ಅವರಿಗೆ ಗೌರವವನ್ನು ಸಲ್ಲಿಸಿದರು. ರಾಜ ಮನೆತನದ ಸದಸ್ಯರಿಗೆ ಇಂತಹ ಶೋಕದ ಕಾಲವನ್ನು ಸ್ಥೈರ್ಯದಿಂದ ದಾಟಿ ಮುನ್ನಡೆಯಲು ಶಕ್ತಿ ಇರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕತಾರ್ ದೇಶಕ್ಕೆ ಭಾರತ ಗಣರಾಜ್ಯದ ರಾಯಭಾರಿಗಳಾದ ಶ್ರೀ ವಿಪುಲ್ ಅವರು ಉಪಸ್ಥಿತರಿದ್ದರು.
ನಂತರ ಗಣ್ಯರಾದ ಕೇಂದ್ರ ಸಚಿವರು ಹಾಗೂ ಭಾರತದ ರಾಯಭಾರಿಗಳು ಭಾರತೀಯ ದೂತಾವಾಸದ ಆವರಣದಲ್ಲಿರುವ 'ಭಾರತ ಭವನ'ದಲ್ಲಿ ಕತಾರಿನಲ್ಲಿರುವ ಭಾರತೀಯ ಸಮುದಾಯದ ಹಿರಿಯ ಮುಖಂಡರನ್ನು ಭೇಟಿ ನೀಡಿ ಚರ್ಚಿಸಿದರು.*
*ಕರ್ನಾಟಕ ಸಂಘ ಕತಾರಿನ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಗೌರವಾನ್ವಿತ ಶ್ರೀ ಕಿರಣ್ ರಿಜೂಜು ಅವರನ್ನು ಭೇಟಿ ನೀಡಿ ಸಚಿವರೊಂದಿಗೆ ಸಮಾಲೋಚನೆಗಳನ್ನು ವಿನಿಮಯ ಮಾಡಿಕೊಂಡರು.*