ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

kundapur : ಗುಲ್ವಾಡಿ ಗ್ರಾಮಆಡಳಿತ  ಅಧಿಕಾರಿಗೆ ಬೆದರಿಕೆ:  ಜಾತಿ ನಿಂದನೆ : ಇಬ್ಬರು ಅರೆಸ್ಟ್…!!

kundapur : ಗುಲ್ವಾಡಿ ಗ್ರಾಮಆಡಳಿತ ಅಧಿಕಾರಿಗೆ ಬೆದರಿಕೆ: ಜಾತಿ ನಿಂದನೆ : ಇಬ್ಬರು ಅರೆಸ್ಟ್…!!

ಕುಂದಾಪುರ: ಗುಲ್ವಾಡಿ ಗ್ರಾಮ‌ ಪಂಚಾಯತ್ ನ ಗ್ರಾಮ ಆಡಳಿತ ಅಧಿಕಾರಿಗೆ ತಂದೆ ಹಾಗೂ ಮಗ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಬೈದು, ಜಾತಿ ನಿಂದನೆ ಮಾಡಿದ ಘಟನೆ ಸಂಭವಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಪಳ್ಳಿ ಸುಲೇಮಾನ್ ಹಾಗೂ ಶಫಿ ಎಂಬವರನ್ನು ಬಂಧಿಸಿದ್ದಾರೆ.
ದಿನಾಂಕ: 15.07.2026 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಗುಲ್ವಾಡಿ ಗ್ರಾಮದ ಗುಲ್ವಾಡಿ ಗ್ರಾಮ ಪಂಚಾಯತ್‌ ನ ಗ್ರಾಮ ಆಡಳಿತ ಅಧಿಕಾರಿ ಕಛೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿರವರಾದ ಪ್ರಕಾಶ ನಾಯ್ಕ್ ಸಮಯ ಬೆಳಿಗ್ಗೆ ಸುಮಾರು 11 ಗಂಟೆಗೆ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಗುಲ್ವಾಡಿಯ ನಿವಾಸಿ ಪಳ್ಳಿ ಸುಲೇಮಾನ್‌ ಮತ್ತು ಅವರ ಮಗ ಶಫಿ ಎಂಬುವವರು ಕಛೇರಿಯ ಪ್
ಒಳಗೆ ಬಂದು ಪ್ರಕಾಶ ನಾಯ್ಕ್ ಟೇಬಲ್‌ ಬಳಿ ನಿಂತು SIR ಫಾರ್ಮ್‌ ಕೊಡಲು ಬಂದಿದ್ದು, ಆಗ ಪಿರ್ಯಾದುದಾರರು ತನ್ನ ಬಳಿ ಕೊಡುವಂತೆ ಹೇಳಿದಾಗ ಆ ಸಮಯ ಆಪಾದಿತರು ಇಬ್ಬರು ಸೇರಿ ಪಿರ್ಯಾದುದಾರಿಗೆ ಅವಾಚ್ಯವಾಗಿ ಬೈದು, ಬೆದರಿಕೆ ಹಾಕಿ ನೀನು ಹೀನ ಜಾತಿಯವನುಎಂದು ಜಾತಿ ನಿಂದನೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 37/2026 U/S : 132, 352, 351(2), 3(5) BNS ಮತ್ತು ಕಲಂ: 3(1)(r)(s) 3(2)(v-a) SC ST ACT ರಂತೆ ಪ್ರಕರಣ ದಾಖಲಾಗಿರುತ್ತದೆ.

H.D ಕುಲಕರ್ಣಿ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ ರವರ ಮಾರ್ಗದರ್ಶನದಂತೆ ಹಾಗೂ ಸಂತೋಷ ಎ ಕಾಯ್ಕಿಣಿ ಮಾನ್ಯ ಪೊಲೀಸ್ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತ, ರವರ ನೇತೃತ್ವದಲ್ಲಿ ನಿರಂಜನ್‌ ಗೌಡ, ಪೊಲೀಸ್ ಉಪ ನಿರೀಕ್ಷಕರು (ಕಾ.ಸು), ಚಂದ್ರಕಲಾ ಮ ಪತ್ತಾರ ಪೊಲೀಸ್ ಉಪ ನಿರೀಕ್ಷಕರು (ತನಿಖೆ) ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ, ಮತ್ತು ಸಿಬ್ಬಂದಿಯವರಾದ ಎ.ಎಸ್ ಸೂರ ನಾಯ್ಕ್‌, ರಮೇಶ್‌ ನರೂಣಿ ಪಿಸಿ, ಮಂಜುನಾಥ ಪಡಸಲಗಿ ಪಿಸಿರವರು ದಿನಾಂಕ: 16.07.2026 ರಂದು ಪ್ರಕರಣದ ಆಪಾದಿತರಾದ ಪಳ್ಳಿ ಸುಲೇಮಾನ್ ಹಾಗೂ ಶಫಿ ತಂದೆ: ಪಳ್ಳಿ ಸುಲೇಮಾನ್ ಎಂಬವರನ್ನು ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

Ads on article

Advertise in articles 1

advertising articles 2

Advertise under the article