udupi: ಕುಂದಾಪುರ ರಾಜಸ್ವ ನಿರೀಕ್ಷಕರ ಕಚೇರಿಯ ಮೇಲ್ಚಾವಣಿಗೆ ಅಂದು ಟಾರ್ಪಲ್ ಹೊದಿಕೆ... ಇಂದು ಟಾರ್ಪಲ್ ಮುಕ್ತ ಕಟ್ಟಡ...! COSTALNEWS BIG impact
Wednesday, June 3, 2026
ಕುಂದಾಪುರ : ಬುದ್ಧಿವಂತರ ಜಿಲ್ಲೆ ಎಂದು ಪ್ರಖ್ಯಾತಿ ಪಡೆದಿರುವ ಉಡುಪಿ ಅಲ್ಲಿನ ಕುಂದಾಪುರ ರಾಜಸ್ವ ನಿರೀಕ್ಷಕರ ಕಚೇರಿಯ ಮೇಲ್ಚಾವಣಿಗೆ ಟಾರ್ಪಲ್ ಹೊದಿಕೆ ಹಾಕಿರುವ ಕುರಿತು COSTALNEWS ಕೆಲವೇ ದಿನಗಳ ಹಿಂದೆ ವರದಿ ಪ್ರಸಾರ ಮಾಡಿತ್ತು. ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಈ ವಿಷಯಕ್ಕೆ ಇದೀಗ ಸಕಾರಾತ್ಮಕ ಅಂತ್ಯ ಕಂಡಿದೆ.
COSTALNEWS ವರದಿ ಪ್ರಸಾರವಾದ ಕೆಲವೇ ಕೆಲವು ದಿನಗಳಲ್ಲಿ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದು, ಕಚೇರಿ ಕಟ್ಟಡದ ಮೇಲ್ಚಾವಣಿಯಿಂದ ಟಾರ್ಪಲ್ ತೆರವುಗೊಳಿಸಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಈಗ ಕುಂದಾಪುರ ಕಂದಾಯ ಇಲಾಖೆಯ ಕಟ್ಟಡ ಟಾರ್ಪಲ್ ಮುಕ್ತಗೊಂಡಿದ್ದು, ಸಾರ್ವಜನಿಕರು ಹಾಗೂ ಕಚೇರಿಗೆ ಆಗಮಿಸುವ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಸಮಸ್ಯೆಗಳನ್ನು ಬೆಳಕಿಗೆ ತರುವ ಮಾಧ್ಯಮಗಳ ಅಗತ್ಯತೆ ಎಷ್ಟಿದೆಯೋ, ಅದೇ ರೀತಿ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಅಧಿಕಾರಿಗಳ ಕಾರ್ಯಕ್ಷಮತೆಯೂ ಅಷ್ಟೇ ಮಹತ್ವದ್ದಾಗಿದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.
ಅಂದು: "ಶೇಮ್..! ಶೇಮ್..!! ಶೇಮ್..!!"
ಇಂದು: "ಹಿರಿಯ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ"
ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿ, ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹವಾಗಿ ಕಾರ್ಯನಿರ್ವಹಿಸುತ್ತಿರುವ COSTALNEWS ವರದಿ ಮತ್ತೊಮ್ಮೆ ಪರಿಣಾಮ ಬೀರಿದ್ದು, ಇದು ನಿಜಕ್ಕೂ COSTALNEWS Impact ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.