ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

karkala: ಕಾರ್ಕಳ ತಾಲೂಕು ಅಂಬೇಡ್ಕರ್ ಭವನ ಕಾಬೆಟ್ಟು ಇದರ ನಿರ್ವಹಣೆಯಲ್ಲಿ ತಾರತಮ್ಯ ಮೇಲ್ವಿಚಾರಣೆಯ ಸಮಿತಿಯನ್ನು ವಜಾ ಗೊಳಿಸುವಂತೆ ಅಂಬೇಡ್ಕರ್ ಸೇನೆ ತಾಲೂಕು ಸಮಿತಿ  ಒತ್ತಾಯ

karkala: ಕಾರ್ಕಳ ತಾಲೂಕು ಅಂಬೇಡ್ಕರ್ ಭವನ ಕಾಬೆಟ್ಟು ಇದರ ನಿರ್ವಹಣೆಯಲ್ಲಿ ತಾರತಮ್ಯ ಮೇಲ್ವಿಚಾರಣೆಯ ಸಮಿತಿಯನ್ನು ವಜಾ ಗೊಳಿಸುವಂತೆ ಅಂಬೇಡ್ಕರ್ ಸೇನೆ ತಾಲೂಕು ಸಮಿತಿ ಒತ್ತಾಯ

ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ತಾಲೂಕು ಡಾ ಬಿ ಆರ್ ಅಂಬೇಡ್ಕರ್ ಭವನ ಇದರ ಉದ್ಘಾಟನೆ ಮಾನ್ಯ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರು ಮಾಡಿದ್ದು ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ ಆದರೆ ಕಾರ್ಕಳ ತಾಲೂಕಿನ ಎಲ್ಲಾ ದಲಿತ ಸಂಘಟನೆ ಹಾಗೂ ಎಲ್ಲಾ ಸಮುದಾಯದ ಮುಖಂಡರ ಬೇಡಿಕೆಯಂತೆ ನಿರ್ಮಾಣವಾಗಿದ್ದಂತೂ ಸತ್ಯ..!
 ಆದರೆ ಇದರ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ಸಮಿತಿಗೆ 3 ಮಂದಿಯ ಆಯ್ಕೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ಪತ್ರ ಸಂಖ್ಯೆ 01/2026-2027 ದಿನಾಂಕ 04-05-2026 ರಂದು ಎಲ್ಲಾ ಸಂಘಟನೆಯ ಸಭೆಯನ್ನು ಕರೆಯಲಾಗಿತ್ತು ಆದ್ರೆ ಆ ಸಭೆಯನ್ನು ರದ್ದು ಮಾಡಿ ಮುಂದಿನ ಸಭೆಯಲ್ಲಿ ಆಯ್ಕೆ ಮಾಡುವುದಾಗಿ ಅಧಿಕಾರಿಗಳು ಹೇಳಿ ಇವಾಗ ರಾಜಕೀಯ ಒತ್ತಡದಿಂದ ಏಕಾಏಕಿ 3 ಜನರನ್ನು ಆಯ್ಕೆ ಮಾಡಿರುವುದು ಖಂಡನೀಯ.
ಅದ್ರಲ್ಲೂ ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆಯಲ್ಲಿ ಇರುವವರನ್ನು ಆಯ್ಕೆ ಮಾಡಿದ್ದು ಒಂದೇ ಸಮುದಾಯದ ಇಬ್ಬರು ಸದಸ್ಯರು ಇದ್ದು ಕಾರ್ಕಳ ತಾಲೂಕಿನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಸತ್ಯಾಸರಮಣಿ ಆರಾಧಕರು ಅದಿದ್ರಾವಿಡ ಸಮುದಾಯದವನ್ನು ಕಡೆಗಣಿಸಿದ್ದು ಇಡೀ ಸಮುದಾಯಕ್ಕೆ ಮಾಡಿದ ಅವಮಾನ ತಮ್ಮ ಪಕ್ಷಕ್ಕೆ ದುಡಿದ ಅದಿದ್ರಾವಿಡ ಸಮುದಾಯವನ್ನು ಕಾರ್ಕಳ ತಾಲೂಕಿನ ಎಲ್ಲಾ ಸರ್ಕಾರದ ಸಮಿತಿಯಲ್ಲಿ ಕಡಗಣನೆ ಮಾಡುತ್ತಿರುವುದು ಇಡೀ ಸಮುದಾಯಕ್ಕೆ ಮಾಡಿದ ಅವಮಾನ ಇದರ ಬಗ್ಗೆ ಆಧಿದ್ರಾವಿಡ ಸಮುದಾಯ ಗಂಭೀರ ಚಿಂತನೆ ಮಾಡಬೇಕಾದ ಅನಿವಾರ್ಯ ಆಗಿದೆ 
 ಇದನ್ನು ಸರಿಪಡಿಸದೆ ಇದ್ದಲ್ಲಿ ಎಲ್ಲಾ ದಲಿತ ಸಂಘಟನೆಯ ಮುಖಂಡರು ಹಾಗೂ ಅದಿದ್ರಾವಿಡ ಸಮುದಾಯದವರು ಒಟ್ಟು ಸೇರಿ ದೊಡ್ಡ ಮಟ್ಟದ ಹೋರಾಟ ನಡೆಸಲು ತೀರ್ಮಾನ ಮಾಡಿದ್ದು ತಕ್ಷಣ ಈ ಸಮಿತಿಯನ್ನು ವಜಾಗೊಳಿಸಿ ಎಲ್ಲಾ ಸಮುದಾಯದವರ ಒಟ್ಟಿಗೆ ಸೇರಿಸಿ ಸಮಿತಿ ರಚಿಸಬೇಕಾಗಿ ಅಂಬೇಡ್ಕರ್ ಸೇನೆ ಕಾರ್ಕಳ ತಾಲೂಕು ಸಮಿತಿ ಅಗ್ರಹ ಮಾಡಿದೆ.



ವರದಿ: ಸತೀಶ್ ಕಾರ್ಕಳ COSTALNEWS ಕುಂದಾಪುರ

Ads on article

Advertise in articles 1

advertising articles 2

Advertise under the article