udupi ಕುಂದಾಪುರ: ಪುರಸಭೆ ವ್ಯಾಪ್ತಿಯ ಪೇಟೆ ಭಾಗದಲ್ಲಿ ಸ್ವಚ್ಛತಾ ಆಂದೋಲನ ಅರಿವು ಕಾರ್ಯಕ್ರಮ
Saturday, May 16, 2026
ಕುಂದಾಪುರ : ತಾಲೂಕಿನ ಪುರಸಭೆ ಪೇಟೆ ಭಾಗದಲ್ಲಿ ದಿನಾಂಕ 16- 5-2026ರಂದು ಕುಂದಾಪುರ ಪುರಸಭಾ ವತಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿಗಳು ಆನಂದ್ ರವರ ನಿರ್ದೇಶನದಂತೆ ಆಯೋಜಿಸಲಾಗಿದ್ದು ಮಳೆಗಾಲ ಸಮೀಪಿಸುತ್ತಿದೆ ಜನರು ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮದ ಅಂಗವಾಗಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು
ಸದರಿ ಕಾರ್ಯಕ್ರಮಕ್ಕೆ ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳು ಪರಿಸರ ಅಭಿಯಂತರರು , ಹಿರಿಯ ಆರೋಗ್ಯ ನಿರೀಕ್ಷಕರು, ಸ್ವಚ್ಛತಾ ಸಿಬ್ಬಂದಿಗಳು,ಸಿಬ್ಬಂದಿ ವರ್ಗದವರು, ಬಿ.ಬಿ ಹೆಗ್ಡೆ ಕಾಲೇಜಿನ NCC ಅಧಿಕಾರಿಯಾದ ಹರೀಶ್ ಬಿ ಮತ್ತು NSS ಅಧಿಕಾರಿಯಾದ ರಾಜೇಶ್ ವಕ್ವಾಡಿ ಹಾಗೂ ಪೂಜಾ ಕುಂದರ್ ಮತ್ತು NCC & NSS ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು
ಪುರಸಭೆ ಅಧಿಕಾರಿಗಳ ಮುಂಜಾಗ್ರತ ಕ್ರಮಕ್ಕೆ ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ