Udupi: ಬೇಕರಿ ಮಾಲೀಕರ ನಡುವೆ ಗಲಾಟೆ : ಚಾಕು ತೋರಿಸಿ ಜೀವ ಬೆದರಿಕೆ ಆರೋಪ :
Sunday, May 24, 2026
ಉಡುಪಿ : ಉಡುಪಿಯ ಕರಾವಳಿ ಬೈಪಾಸ್ ಸಮೀಪದ ಕೃಷ್ಣ ಬೇಕರಿಯ ಮಾಲೀಕನೊಬ್ಬ, ಹಲವು ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಪೂಜಾ ಬೇಕರಿಯ ಮಾಲೀಕನ ಮೇಲೆ ಹಲ್ಲೆ ನಡೆಸಿ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ ಎನ್ನಲಾಗಿದೆ.
ಮಂಗಳೂರು ಮೂಲದ ಕಟಪಾಡಿ ನಿವಾಸಿ ಕೃಷ್ಣ ಬೇಕರಿ ಮಾಲಕ, ಕಿದಿಯೂರು ನಿವಾಸಿ ಪೂಜಾ ಬೇಕರಿ ಮಾಲಕ ಮುರಳಿ ಎಂಬವರಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ
ನಿನ್ನೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ, ಬೇಕರಿ ಮುಂದೆ ಗಲಾಟೆ ಹಾಗೂ ದಾಂಧಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ವಿಡಿಯೋದಲ್ಲಿ ಆರೋಪಿ ಚಾಕು ತೆಗೆದು ಬೆದರಿಕೆ ಹಾಕುತ್ತಿರುವ ದೃಶ್ಯ ಕಂಡುಬಂದಿದೆ ಎಂದು ಹೇಳಲಾಗಿದೆ.
ಈ ಪ್ರಕರಣದ ಕುರಿತು ಉಡುಪಿ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಹೆಚ್ಚಿನ ತನಿಖೆ ಮುಂದುವರೆದಿದೆ