udupi ಕುಂದಾಪುರ ರಾಜಸ್ವ ನಿರೀಕ್ಷಕರ ಕಚೇರಿಗೆ ಟಾರ್ಪಲ್ ಹೊದಿಕೆ..!
Monday, May 25, 2026
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಕಂದಾಯ ಇಲಾಖೆಯ ಕಟ್ಟಡ ಇದೀಗ ಮಳೆರಾಯನ ಭೀತಿಯಿಂದ ಟಾರ್ಪಲ್ ಆಶ್ರಯ ಪಡೆದಿದೆ..!
ಮಳೆಗಾಲ ಆರಂಭಕ್ಕೂ ಮುನ್ನವೇ ಮೇಲ್ಚಾವಣಿಗೆ ಟಾರ್ಪಲ್ ಹೊದಿಸಿರುವ ದೃಶ್ಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಸರ್ಕಾರಿ ಕಚೇರಿಗಳ ಅಭಿವೃದ್ಧಿಯ ಭರವಸೆಗಳ ನಡುವೆ,
ಪ್ರಮುಖ ಕಚೇರಿಯೇ ದುಸ್ಥಿತಿಯಲ್ಲಿ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ..!
“ಇದು ಕಂದಾಯ ಇಲಾಖೆ ಕಚೇರಿಯೋ..?
ಅಥವಾ ಕುಸಿಯುವ ಹಂತದ ಕಟ್ಟಡವೋ..?” ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಕುಂದಾಪುರ ಭಾಗದಲ್ಲಿ ಹಳೆಯ ಕಟ್ಟಡಗಳು ಮರೆಯಾಗುತ್ತಿರುವ ಸಮಯದಲ್ಲೇ
ಕೇಂದ್ರ ಬಿಂದುವಾಗಿ ರಾರಾಜಿಸುತ್ತಿದೆ ಈ ಕಚೇರಿಯ ಅವ್ಯವಸ್ಥೆ..!
ಟಾರ್ಪಲ್ ಶ್ರೀರಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ..!
👉 ಸಾರ್ವಜನಿಕರ ಒತ್ತಾಯ :
ಕಟ್ಟಡವನ್ನು ತಕ್ಷಣ ದುರಸ್ತಿ ಮಾಡಬೇಕು ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು..! ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹ