udupi ಗಂಗೊಳ್ಳಿ: ಹಣದ ವಿಚಾರಕ್ಕೆ ಗುಂಪು ಘರ್ಷಣೆ :ಕೊಲೆ ಯತ್ನ -ಮೂವರ ವಿರುದ್ಧ ಪ್ರಕರಣ ದಾಖಲು
Sunday, May 17, 2026
ಕುಂದಾಪುರ: ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಗುಂಪು ಘರ್ಷಣೆಯಾಗಿದ್ದು ಗಲಾಟೆಯ ಸಂದರ್ಭ ಯುವಕನೋರ್ವನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ರಾಡ್‌ನಿಂದ ಕೊಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿರುವ ಗಂಭೀರ ಘಟನೆ ತ್ರಾಸಿ ಗ್ರಾಮದ ಆನುಗೋಡು ಎಂಬಲ್ಲಿ ಶನಿವಾರ ನಡೆದಿದೆ.
ಗುಂಪು ಘರ್ಷಣೆಯಿಂದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಹಂಗಳುರು ಗ್ರಾಮದ ವನದುರ್ಗಿ ನಿಲಯದ ನಿವಾಸಿ ನಾಗರಾಜ ಜೋಗಿ (27) ಎಂಬವರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರದೀಪ್ ಹೆಮ್ಮಾಡಿ, ಆದಿತ್ಯ ಶೆಟ್ಟಿ ಮತ್ತು ಶ್ರೀಕಾಂತ ಮೊಗವೀರ ಎಂಬವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಈ ವೇಳೆ ಪ್ರದೀಪ ಎಂಬಾತನು ಕೊಲೆ ಮಾಡುವ ಉದ್ದೇಶದಿಂದ ನಾಗರಾಜ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಬಲವಾಗಿ ಬೀಸಿದ್ದಾನೆ. ತಕ್ಷಣ ಜಾಗರೂಕರಾದ ನಾಗರಾಜ ಅವರು ತಪ್ಪಿಸಿಕೊಂಡ ಕಾರಣ, ರಾಡ್‌ನ ಏಟು ಅವರ ಗಲ್ಲಕ್ಕೆ ತಗುಲಿ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಉಳಿದ ಆರೋಪಿಗಳು ನಾಗರಾಜ ಅವರ ಮೇಲೆ ಮುಗಿಬಿದ್ದು ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಹಲ್ಲೆಯ ಸಂದರ್ಭದಲ್ಲಿ ಆರೋಪಿಗಳು ಇವತ್ತು ನೀನು ಬದುಕಿದ್ದೀಯಾ, ಮುಂದಕ್ಕೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಸಾರ್ವಜನಿಕವಾಗಿ ಪ್ರಾಣ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಾಳು ನಾಗರಾಜ ಸದ್ಯ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವ ಸಾಧ್ಯತೆ ಹೆಚ್ಚಿದೆ..! ತನಿಖೆ ಕಾರ್ಯಚರಣೆ ಮುಂದುವರಿದಿದೆ
ಈ ಭೀಕರ ಹಲ್ಲೆಯ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ: 352, 109, 115(2), 351(2) ಜೊತೆಗೆ 3(5) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ