udupi ಬೈಂದೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಂತ ಭಕ್ತರ ಚಿನ್ನಾಭರಣ ಕಳವು: ಕೇವಲ ಎರಡೇ ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸರು
Friday, May 8, 2026
ಬೈಂದೂರು: ಕರಾವಳಿ ಭಾಗದ ಇತಿಹಾಸ ಪ್ರಸಿದ್ಧ ಕಾರ್ಣಿಕ ಕ್ಷೇತ್ರ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ್ದ ವ್ಯಕ್ತಿಯೋರ್ವರ ಚಿನ್ನ ಕಳುವಾಗಿದ್ದು ಇದನ್ನು ಕೇವಲ ಎರಡೇ ಗಂಟೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಕೊಲ್ಲೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲ್ಲೂರು ದೇವಸ್ಥಾನದಲ್ಲಿ ಕೇರಳದ ಭಕ್ತರೊಬ್ಬರ ಎರಡು ಚಿನ್ನದ ಸರ ಮತ್ತು ನಗದು ಸಹಿತ ಪರ್ಸ್ ಕಳುವಾಗಿತ್ತು. ಚಿನ್ನಾಭರಣ ಕಳೆದುಕೊಂಡ ಭಕ್ತರು ತಕ್ಷಣ ಕೊಲ್ಲೂರು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು.
ತಕ್ಷಣ ಕಾರ್ಯಪ್ರವೃತ್ತರಾದ ಕೊಲ್ಲೂರು ಪೊಲೀಸ್ ಠಾಣೆಯ ತನಿಕಾ ವಿಭಾಗದ ಅಧಿಕಾರಿ ಭೀಮಶಂಕರ್ ಮತ್ತು ಸಿಬ್ಬಂದಿಗಳು ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕೇವಲ ಎರಡು ಗಂಟೆಗಳಲ್ಲಿ ಕಳುವಾದ ಚಿನ್ನವನ್ನು ಪತ್ತೆಹಚ್ಚಿ, ಬಳಿಕ ಕೇರಳದ ಭಕ್ತಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು.
ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ