kundapur: ಹೊಳೆ ಯುವುದೆಲ್ಲಾ "ಚಿನ್ನವಲ್ಲ", ಬೆಳ್ಳಗಿರೋದೆಲ್ಲ "ಹಾಲಲ್ಲ" ಎಲ್ಲರೂ ನಂಬಿಕೆಗೆ "ಅರ್ಹರಲ್ಲ"
Friday, May 8, 2026
ವರದಿ: ನಂದಾ ಕುಂದಾಪುರ
ದುರಾಸೆ ಯಾರನ್ನು ಬಿಟ್ಟಿಲ್ಲ ಹೇಳಿ? ಎಲ್ಲರಿಗೂ ಆದಷ್ಟು ಬೇಗ ದುಡ್ ಮಾಡ್ಬೇಕೆಂಬ ಮಹತ್ವಾಕಾಂಕ್ಷೆ. ಏಕೆಂದ್ರೆ, ದುಡ್ಡಿಗೆ ಇರೋವಷ್ಟು ಮರ್ಯಾದೆ ಬೇರೆ ಯಾವುದಕ್ಕೂ ಇಲ್ಲ. ಈ ಪ್ರಪಂಚ ನಿಂತಿರೋದೇ ದುಡ್ಡಿನ ಮೇಲೆ. ದುಡ್ಡು ಸಂಪಾದಿಸೋದು ತಪ್ಪಲ್ಲ, ಆದರೆ ಅದಕ್ಕೆ ನಾವು ಆಯ್ಕೆ ಮಾಡ್ಕೊಂಡಿರೋ ದಾರಿ ತಪ್ಪಾಗಿರಬಾರದು. ದುಡ್ಡು ಸಂಪಾದನೆಗೆ ಹಲವು ದಾರಿಗಳಿವೆ. ಕೆಲವು ನ್ಯಾಯವಾದ ದಾರಿ (ಸ್ವಲ್ಪ ಕಷ್ಟದ್ದು), ಕೆಲವು ಸುಲಭದ ದಾರಿ, ಇನ್ ಕೆಲವು ಮೋಸದ ದಾರಿ. ನ್ಯಾಯವಾಗಿ ಸಂಪಾದಿಸಬೇಕಾದರೆ ನಾವು ನಮ್ಮ ಶ್ರಮ, ಬಂಡವಾಳ, ಬುದ್ದಿವಂತಿಕೆಯನ್ನು ವ್ಯಯಿಸಬೇಕಾಗುತ್ತದೆ. ಹಾಗಾಗಿ ಇದು ಕಷ್ಟ ಅಂತ ಹೆಚ್ಚಿನವರು ಬೇಗ ದುಡ್ಡು ಮಾಡಲು Short-Cut-Method ನ್ನು Follow ಮಾಡ್ತಾರೆ.
ಕಳ್ಳತನ, ದರೋಡೆ, ಸುಳ್ಳು, ಮೋಸ, ವಂಚನೆ, ಯಾಮಾರ್ಸೋದು, ಸೋಗು ಹಾಕೋದು, ಬಣ್ಣದ ಮಾತಾಡೋದು, ಇವೆಲ್ಲ ಈ Method ನ Tools.
ತಾಯಿಯನ್ನು ನೋಡಿಕೊಳ್ಳಲು ನೇಮಿಸಿದ್ದ ಮಹಿಳೆಯೊಬ್ಬಳು ಮನೆಯಲ್ಲಿನ ಚಿನ್ನಾಭರಣಗಳನ್ನು ಕದ್ದು ಓಡಿಹೋದ ವರದಿಯನ್ನು ಓದಿದಾಗ, ಅಷ್ಟೊಂದು ಆಶ್ಚರ್ಯವಾಗಲಿಲ್ಲ. ಕಾರಣ, "ಈಗೀಗ ರಕ್ತ ಸಂಬಂಧಿಗಳೇ, ಇಂತಹ ಕುಕೃತ್ಯವನ್ನು ಮಾಡಿದ ಅನೇಕ ಘಟನೆಗಳು ನಡೆದಿದೆ. ಮನೆ ಕೆಲಸಕ್ಕೆ, ವಾಚ್ಮ್ಯಾನ್, ಡ್ರೈವರ್, ಹೋಂನರ್ಸ್, ತೋಟದ ಕೆಲಸಕ್ಕೆ, ಅಂತ ಅಪರಿಚಿತರನ್ನು ಆಯ್ಕೆ ಮಾಡಿ ಕೊಳ್ಳುವಾಗ ಅವರ ಪೂರ್ವಾಪರವನ್ನು ಸರಿಯಾಗಿ ವಿಚಾರಿಸಿ, ಅವರ ಆಧಾರ್, ಪಾನ್, ಫೋಟೋ, ಅವರ ಹಾಗೂ ಅವರ ಸಂಬಂಧಿಕರ ಮೊಬೈಲ್ ನಂಬರ್, ಅವರ ಮನೆ ವಿಳಾಸ ಇವೆಲ್ಲವನ್ನೂ ಪಡೆದುಕೊಳ್ಳಲೇಬೇಕು. ಹೆಚ್ಚಿನವರು ಇದರಲ್ಲಿ ಯಾವುದನ್ನೂ ಪಡೆಯದೇ ಕೆಲಸಕ್ಕೆ ನೇಮಿಸಿ ಕೊಂಡವರಿದ್ದಾರೆ. ಏಕೆಂದರೆ, ಇವರೆಲ್ಲಾ ಹೊರಗಿನವರು. ಇವರನ್ನು ನಾವು ಮನೆಯ ಒಳಗೆ ಬಿಟ್ಟುಕೊಳ್ಳುವಾಗ ಏನು ಬೇಕಾದ್ರೂ ನಡೆಯಬಹುದು. ಇದು ಅನಾಹುತಕ್ಕೆ ದಾರಿ ಮಾಡಿ ಕೊಟ್ಟಂತೆ. ಕೆಲವರು ತಮ್ಮಲ್ಲಿ ಈ ಎಲ್ಲಾ ದಾಖಲೆಗಳಿಲ್ಲ ಎನ್ನಬಹುದು, ಇಲ್ಲಾ ಕೊಟ್ಟರೂ, Fake Documents ಕೊಡಬಹುದು. ಹಾಗಾಗಿ, "ನಿಮಗೆಲ್ಲಾ ಉಚಿತವಾಗಿ ಇನ್ಶೂರೆನ್ಸ್ ಮಾಡಿಸ್ತೀವಿ"(ಕೇವಲ 100-200 ರೂ.) ಅಂತ ಅಂದಾಗ ಸರಿಯಾದ ಡಾಕ್ಯುಮೆಂಟ್ಸ್ ಕೊಟ್ಟೇ ಕೊಡ್ತಾರೆ. ಇನ್ನು ಚಿನ್ನಾಭರಣ, ಹಣ, ಹಾಗೂ ಇನ್ನಿತರ ಅಮೂಲ್ಯ ಬೆಲೆ ಬಾಳುವ ವಸ್ತುಗಳನ್ನು ಅವರಿಗೆ ಕಾಣಿಸುವಂತೆ ಇಡುವುದು, ತಮ್ಮ ಶ್ರೀಮಂತಿಕೆಯನ್ನು ಅವರೆದುರು ಪ್ರದರ್ಶನ ಮಾಡೋದು ಸಲ್ಲದು. ಏಕೆಂದರೆ ಅವುಗಳನ್ನು ನೋಡುವಾಗ ಅವರ ಮನಸ್ಸು ಚಂಚಲವಾಗಿ ಕುಕ್ರತ್ಯಕ್ಕೆ ಪ್ರೇರೇಪಿಸುತ್ತದೆ. ಸಂಪತ್ತಿನ ಜೊತೆ ಪ್ರಾಣಕ್ಕೂ ಸಂಚಕಾರ ಬರಬಹುದು. ನಮ್ಮ ಜಾಗ್ರತೆ ನಮಗಿದ್ದರೆ ಒಳ್ಳೆಯದು. ಮನೆಯ ಹಾಗೂ ಕಾಪಾಟಿನ ಬೀಗದಕೈ ಇದ್ಯಾವುದೂ ಅವರ ಕೈಗೆ ಸಿಗುವಂತೆ ಇಡಬಾರದು. CC. Camera ಅಳವಡಿಸಿದರೆ ಇನ್ನೂ ಒಳ್ಳೆಯದು. ಹೊಳೆಯುವುದೆಲ್ಲಾ "ಚಿನ್ನವಲ್ಲ", ಬೆಳ್ಳಗಿರೋದೆಲ್ಲ "ಹಾಲಲ್ಲ" ಎಲ್ಲರೂ ನಂಬಿಕೆಗೆ "ಅರ್ಹರಲ್ಲ" ನೆನಪಿರಲಿ. ಏನಂತೀರಿ? ✍️ 08/05/26
ನಂದಾ ಕುಂದಾಪುರ 9242401083